|
ರೈತರ ಕಣ್ಣೀರಿಗೆ ಕಾರಣವಾದ ಈರುಳ್ಳಿ
ಬೆಂಗಳೂರು: `ಎ' ಗ್ರೇಡ್‌ನ ಈರುಳ್ಳಿಯನ್ನು ಈಗಾಗಲೇ
ಸಾಕಷ್ಟು ಖರೀದಿ ಮಾಡಿದ್ದರಿಂದ ಅದರ ಖರೀದಿಯನ್ನು ನಿಲ್ಲಿಸಿ `ಬಿ'
ಮತ್ತು `ಸಿ' ಗ್ರೇಡ್ ಈರುಳ್ಳಿಯನ್ನು ಖರೀದಿಸುವಂತೆ
ಜಿಲ್ಲಾಧಿಕಾರಿಗಳಿಗೆ ಸರ್ಕಾರ ಖರೀದಿಸುವಂತೆ ಹೇಳಿದೆ. ಇದರಿಂದ ರೈತರಿಗೆ
`ಎ' ಗ್ರೇಡ್‌ನ ಈರುಳ್ಳಿಯನ್ನು ಕೇವಲ ೨೦೦-೨೫೦ ರೂ. ಕ್ವಿಂಟಲ್‌ಗೆ
ಮಾರುವ ಪರಿಸ್ಥಿತಿ ಒದಗಿದೆ.
ಸಾವಿರಾರು ಕ್ವಿಂಟಾಲ್ `ಎ' ಗ್ರೇಡ್‌ನ ಈರುಳ್ಳಿ ಮಾರುಕಟ್ಟೆಗೆ ಬಂದು
ಬಿದ್ದಿವೆ. ಈರುಳ್ಳಿಯನ್ನು ಬೆಂಬಲ ಬೆಲೆಗೆ ಖರೀದಿಸಲು ಸರ್ಕಾರ ಈಗಾಗಲೇ
೫ ಕೋಟಿ ರೂ. ವಿನಿಯೋಗಿಸಿದೆ. ಕ್ವಿಂಟಲ್‌ಗೆ `ಎ' ಗ್ರೇಡ್ ಈರುಳ್ಳಿಯನ್ನು
೫೦೦ ರೂ. `ಬಿ' ಗ್ರೇಡನ್ನು ೨೭೦ ರೂ. ಮತ್ತು `ಸಿ' ಗ್ರೇಡ್
ಈರುಳ್ಳಿಯನ್ನು ೧೦೦ ರೂ.ನಂತೆ ಖರೀದಿಸುತ್ತಿದ್ದ ಸರ್ಕಾರ
ಒಮ್ಮಿಂದೊಮ್ಮೆಲೇ `ಎ' ಗ್ರೇಡ್ ಈರುಳ್ಳಿಯನ್ನು ಸರ್ಕಾರ
ಖರೀದಿಸುವುದನ್ನು ನಿಲ್ಲಿಸಿದ್ದರಿಂದ ರೈತರು ಕಂಗಾಲಾಗಿದ್ದಾರೆ.
`ಈರುಳ್ಳಿಯನ್ನು ಸರ್ಕಾರ ಖರೀದಿಸಬಹುದು. ಆದರೆ ಅದನ್ನು
ಮಾರುಕಟ್ಟೆಯಲ್ಲಿ ಮಾರುವುದು ಕಷ್ಟವಾಗಿದೆ. ಮಳೆ
ಬಂದದ್ದರಿಂದ ಎಳೆಯ ಈರುಳ್ಳಿಯನ್ನೇ ಕಿತ್ತು ತಂದು ಮಾರಾಟ
ಮಾಡಲು ಪ್ರಯತ್ನಿಸಿದ್ದರಿಂದ ಈರುಳ್ಳಿ ಮಾರುಕಟ್ಟೆ ಕುಸಿದಿದೆ'
ಎಂದು ಅಧಿಕಾರಿಗಳು ಹೇಳುತ್ತಾರೆ.
ಇನ್ನಷ್ಟು
ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ
ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
-ಅಧಿವೇಶನದಲ್ಲಿ ಹೋರಾಟ
ಸನ್ ಫೀಸ್ಟ್ ಚಿತ್ರ ಪ್ರಶಸ್ತಿ
ವಿತರಣೆ
ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ
ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!
ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ
|