Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 15 November 2006 05:08 PM

ನವೆಂಬರ್೧೫ ರಿಂದ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ

 

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಕಾರ್ತೀಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮ ನವೆಂಬರ್೧೫ ರಂದು ಪ್ರಾರಂಭವಾಗಲಿದೆ.
 

ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದ ನವೆಂಬರ್ ೧೫ ರಿಂದ ೨೦ ರವೆಗೂ ಸಂಭ್ರಮದಿಂದ ಲಕ್ಷ ದೀಪೋತ್ಸವವನ್ನು ಆಚರಿಸಲಾಗುವುದು.
 

ನ.೧೯ರಂದು ನಡೆಯುವ ಸರ್ವಧರ್ಮ ಸಮ್ಮೇಳನವನ್ನು ರಾಜ್ಯದ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಸ್ವಾಮಿ ಸುಖಬೋಧಾನಂದ, ಅಶೋಕ್ ಕುಮಾರ್, ಭಾನು ಮುಷ್ತಾಕ್ ಹಾಗೂ ಪಾವಗಡ ಪ್ರಕಾಶ್ ರಾವ್ ಉಪನ್ಯಾಸ ನೀಡಲಿದ್ದಾರೆ.
 

ನ.೨೦ರಂದು ನಡೆಯುವ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಗೀತಾನಾಗಭೂಷಣ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಕೆ.ಪಿ. ಪುತ್ತೂರಾಯ, ವೈ.ವಿ. ಗುಂಡೂರಾವ್, ಪ್ರೊ. ಡಿ.ಎಸ್. ಸದಾಶಿವ ಮೂರ್ತಿ ಉಪನ್ಯಾಸ ನೀಡಲಿದ್ದಾರೆ.
 

ನ.೧೮ ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ. ನ.೧೮ರಂದು ಲಲಿತ ಕಲಾಗೋಷ್ಠಿ, ವಾದ್ಯ ಗೋಷ್ಠಿ, ಚೆಲುವರಾಜು ಅವರಿಂದ ಶಾಸ್ತ್ರೀಯ ಸಂಗೀತ, ಡಾ. ರೋಹಿಣಿ ಮೋಹನ ಅವರ ಸುಗಮ ಸಂಗೀತ, ಸಿತಾರ ವೈದ್ಯ ಅವರ ಭರತನಾಟ್ಯ ಕಾರ್ಯಕ್ರಮವಿರುತ್ತದೆ.
 

ನ.೧೯ರಂದು ಬೆಂಗಳೂರಿನ ಸರಳಾಯ ಸೋದರಿಯರಿಂದ ಶಾಸ್ತ್ರೀಯ ಸಂಗೀತ ಗಾಯನ.
 

ನ.೨೦ರಂದು ಬೆಂಗಳೂರಿನ ನಿರುಪಮಾ ಮತ್ತು ರಾಜೇಂದ್ರ ಅವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.
 

ನ.೨೧ ರಂದು ಸಮವಸರಣ ಪೂಜೆ, ಭಕ್ತಿಗೀತೆ ಗಾಯನ, ವೇದ ಮಂತ್ರ ಪಠನ ನಡೆಯಲಿದೆ.
 

ಲಕ್ಷ ದೀಪೋತ್ಸವದ ಅಂಗವಾಗಿ ವಿಶೇಷವಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.


ಇನ್ನಷ್ಟು

 

ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ

ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ -ಅಧಿವೇಶನದಲ್ಲಿ ಹೋರಾಟ

ಸನ್ ಫೀಸ್ಟ್ ಚಿತ್ರ ಪ್ರಶಸ್ತಿ ವಿತರಣೆ

ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ

ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!

ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com