|
ಇಂಗ್ಲೀಷ್ ಭಾಷೆಯಲ್ಲೂ ಪ್ರಸಾರವಾಗಲಿರುವ ಅಲ್-ಜಜೀರಾ
ಬಾಗ್ದಾದ್: ಒಸಾಮಾ-ಬಿನ್-ಲಾಡೆನ್‌ನ ಸುದ್ದಿ ನೀಡಿ ಪ್ರಸಿದ್ಧವಾದ
ಅರೇಬಿಕ್ ಸೆಟಲೈಟ್ ಟೆಲಿವಿಷನ್ ಸ್ಟೇಷನ್ `ಅಲ್ ಜಜೀರಾ' ಬುಧವಾರ
ತನ್ನ ಇಂಗ್ಲೀಷ್ ಭಾಷೆಯ ವಾಹಿನಿಗೆ ಚಾಲನೆ ನೀಡಿತು.
೨೪ ಗಂಟೆಗಳೂ ಪ್ರಸಾರವಾಗಲಿರುವ ಅಲ್-ಜಜೀರಾದ ಇಂಗ್ಲೀಷ್ ವಾಹಿನಿ
ದೋಹಾ, ಕೌಲಾಲಂಪುರ್, ವಾಷಿಂಗ್ಟನ್ ಮತ್ತು ಲಂಡನ್‌ಗಳಿಂದ
ಏಕಕಾಲಕ್ಕೆ ಪ್ರಸಾರವಾಗಲಿದೆ.
ಈ ವಾಹಿನಿ ಮಧ್ಯ ಪ್ರಾಚ್ಯ ಪ್ರದೇಶಗಳ ಬಗ್ಗೆ ಸವಿವರವಾಗಿ ಜಗತ್ತಿಗೆ
ಸಾರುವ ಪ್ರಥಮ ವಾಹಿನಿಯಾಗಿದೆ ಎಂದು ಹೇಳಲಾಗುತ್ತದೆ.
ಅಲ್-ಜಜೀರಾ ಒಸಾಮಾ-ಬಿನ್-ಲಾಡೆನ್, ಮತ್ತಿತರ ಅಲ್-ಖೈದಾ ಉಗ್ರಗಾಮಿ
ಮುಖಂಡರ ಬಗ್ಗೆ ಪ್ರಸಾರ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ
ಖಂಡನೆಗೆ ಒಳಗಾಗಿತ್ತು.
ಇರಾಕ್ ಯುದ್ಧದ ಸಂದರ್ಭದಲ್ಲಿ ಅಮೆರಿಕಾ ಸೈನ್ಯ ಅಲ್-ಜಜೀರಾ
ಸ್ಟೇಷನ್ನಿನ ಬಾಗ್ದಾದ್ ಕೇಂದ್ರವನ್ನು ಬಾಂಬ್ ಧಾಳಿಯಿಂದ
ನಾಶಪಡಿಸಿತ್ತು. ಇದರಲ್ಲಿ ಒಬ್ಬ ವರದಿಗಾರನ ಮರಣ ಮತ್ತು ಒಬ್ಬ
ಛಾಯಾಗ್ರಾಹಕ ಗಾಯಗೊಂಡಿದ್ದ.
`ಅಲ್-ಜಜೀರಾ'ದ ಇಂಗ್ಲಿಷ್ ವಾಹಿನಿ ಕೂಡಾ ಅಲ್-ಖೈದಾದ ವಿಡಿಯೋ
ಚಿತ್ರೀಕರಣವನ್ನು ಪ್ರಸಾರ ಮಾಡಲಿದೆ. ನಾವು ಪಕ್ಷಾತೀತವಾದ
ಮತ್ತು ನಿರ್ಧಿಷ್ಟ ಸುದ್ದಿಯನ್ನು ನೀಡಲಿದ್ದೇವೆ' ಎಂದು ಅಲ್-ಜಜೀರಾ
ಇಂಗ್ಲಿಷ್ ವಾಹಿನಿಯ ಲಂಡನ್ ಕೇಂದ್ರದ ಮುಖ್ಯಸ್ಥೆ ಸ್ಯೂ ಫಿಲಿಫ್ಸ್
ಹೇಳುತ್ತಾರೆ.
ಇನ್ನಷ್ಟು
ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ
ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
-ಅಧಿವೇಶನದಲ್ಲಿ ಹೋರಾಟ
ಸನ್ ಫೀಸ್ಟ್ ಚಿತ್ರ ಪ್ರಶಸ್ತಿ
ವಿತರಣೆ
ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ
ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!
ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ
|