|
ಭಾರತ ಪಾಕ್ ಕಾರ್ಯದರ್ಶಿ ಸಭೆ ಸಫಲ
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕಾರ್ಯದರ್ಶಿ
ಮಟ್ಟದ ಎರಡು ದಿನಗಳ ಸಭೆ ಬುಧವಾರ ಮುಕ್ತಾಯಗೊಂಡಿತು.
ಸಭೆಯಲ್ಲಿ ಭಾರತದ ಪರವಾಗಿ ಶಿವಶಂಕರ ಮೆನನ್ ಮತ್ತು
ಪಾಕಿಸ್ತಾನದ ಪರವಾಗಿ ರಿಯಾಜ್ ಮಹಮ್ಮದ್ ಖಾನ್
ಭಾಗವಹಿಸಿದ್ದರು. ಭಯೋತ್ಪಾದನಾ ನಿಗ್ರಹ ವಿಷಯ ಸಭೆಯಲ್ಲಿ
ಪ್ರಮುಖವಾಗಿ ಚರ್ಚಿತವಾಯಿತು. ಸಭೆಯಲ್ಲಿ ಪಾಕಿಸ್ತಾನ ಮತ್ತು
ಭಾರತ ಪರಸ್ಪರ ಸಹಯೋಗದೊಂದಿಗೆ ಭಯೋತ್ಪಾದನೆ
ನಿಗ್ರಹಿಸುವ ನಿರ್ಧಾರಕ್ಕೆ ಬಂದಿವೆ.
ಉಗ್ರಗಾಮಿ ರಹಸ್ಯ ಮಾಹಿತಿಗಳ ವಿನಿಮಯಕ್ಕಾಗಿ ಭಾರತ ಮತ್ತು
ಪಾಕಿಸ್ತಾನಗಳ ಮೂರು ಅಧಿಕಾರಿಗಳನ್ನು ಉಳ್ಳ `ಜಂಟಿ
ಭಯೋತ್ಪಾದನಾ ನಿಗ್ರಹ ಸಮಿತಿ'ಯನ್ನು ರಚಿಸುವ ನಿರ್ಧಾರ ಈ
ಸಭೆಯಲ್ಲಿ ಕೈಗೊಳ್ಳಲಾಯಿತು.
ಭಾರತವು ಸಭೆಯಲ್ಲಿ ಜುಲೈ೧೧ರಂದು ಮುಂಬೈನಲ್ಲಿ ನಡೆದ
ಬಾಂಬ್ ಸ್ಫೋಟದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಸಾಬೀತು
ಪಡಿಸಬಲ್ಲ ಸಾಕ್ಷ್ಯಗಳನ್ನು ಪಾಕಿಸ್ತಾನಕ್ಕೆ ನೀಡಿತು. ಆದರೆ ಸಭೆಯ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ತಾನ ವಿದೇಶಾಂಗ
ಕಾರ್ಯದರ್ಶಿ ರಿಯಾಜ್ ಮಹಮ್ಮದ್ ಖಾನ್ `ಭಾರತವು ಜುಲೈ ೧೧ರ
ಸ್ಫೋಟದ ಬಗ್ಗೆ ಕೆಲವು ಮಾಹಿತಿಗಳನ್ನಷ್ಟೇ ನೀಡಿದೆ' ಎಂದು
ಹೇಳಿದ್ದಾರೆ.
ಸಿಯಾಚಿನ್, ಕಾಶ್ಮೀರ ವಿಷಯಗಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ
ಮಾತುಕತೆ ಅಗತ್ಯವಿದೆ ಎಂದು ಖಾನ್ ಹೇಳಿದ್ದಾರೆ.
ಭಾರತ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮುಂದಿನ ತಿಂಗಳು
ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.
ಇನ್ನಷ್ಟು
ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ
ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್‌ಚಾಲಿತ ಬಸ್ಸು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
-ಅಧಿವೇಶನದಲ್ಲಿ ಹೋರಾಟ
ಸನ್ ಫೀಸ್ಟ್ ಚಿತ್ರ ಪ್ರಶಸ್ತಿ
ವಿತರಣೆ
ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ
ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!
ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ
|