|
ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಕಾಲ ಮುಷ್ಕರ
ಪೂನಾ-ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ತಡೆ, ಗಡಿಭಾಗದ
ಜನರಿಂದ ಭಾರಿ ಪ್ರತಿಭಟನೆ ಸಂಭವ
ಬೆಳಗಾವಿ: ಕರ್ನಾಟಕದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ
ಕಾರ್ಖಾನೆಗಳ ನಡುವೆ ದರ ನೀಡಿಕೆ ಸಂಬಂಧದಲ್ಲಿ ಉಂಟಾಗಿರುವ
ಗೊಂದಲದಿಂದಾಗಿ ಬೇಸತ್ತ ರೈತರು ಸೋಮವಾರ (ನ.೧೩)ದಿಂದ
ಅನಿರ್ಧಿಷ್ಟ ಕಾಲದವರೆಗೂ ಹೋರಾಟ ಕೈಗೊಳ್ಳಲು ನಿರ್ಧರಿಸಿದ್ದಾರೆ.
`ಸೋಮವಾರದಿಂದಲೇ ಈ ಹೋರಾಟ ಆರಂಭವಾಗಲಿದ್ದು ಬಾಗಲಕೋಟೆ,
ಬೆಳಗಾವಿ, ಬಿಜಾಪುರ ಜಿಲ್ಲೆಗಳ ಎಲ್ಲಾ ಕಬ್ಬು ಬೆಳೆಗಾರರು ಅನಿರ್ಧಿಷ್ಟ
ಅವಧಿ ರಸ್ತೆ ತಡೆ ಆರಂಭಿಸಿ ಹೋರಾಟ ನಡೆಸಲಿದ್ದಾರೆ' ಎಂದು ರೈತ
ಮುಖಂಡ ಸುಭಾಷ ಶಿರಬೂರ, ಮುತ್ತಪ್ಪಕೋಮಾರ ಹಾಗೂ ಅಪ್ಪಾಜಿ
ಉತ್ತೂರ ಹೇಳಿದ್ದಾರೆ.
ಸರ್ಕಾರ ಪತ್ರಿ ಟನ್ ಕಬ್ಬಿಗೆ ೧೨೦೦ರೂ. ನಿಗದಿಪಡಿಸಿತ್ತು. ಆದರೆ ಸಕ್ಕರೆ
ಕಾರ್ಖಾನೆಗಳ ಆಡಳಿತ ಮಂಡಳಿಯವರು ೯೦೦ ರೂ.ಗಳನ್ನು ಮಾತ್ರ
ನೀಡಲು ಮುಂದಾಗಿರುವುದು ಬಿಕ್ಕಟಿಗೆ ಕಾರಣ ಎನ್ನಲಾಗಿದೆ.
ಕಳೆದ ತಿಂಗಳು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ
ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ನಿರ್ಧಾರವಾದಂತೆ
೧೨೦೦ ರೂ. ಕೊಡಲು ಒಪ್ಪದ ಆರು ಸಕ್ಕರೆ ಕಾರ್ಖಾನೆಗಳು ೯೦೦ ರೂ.
ಕೊಡುವುದಾಗಿ ಹೇಳಿದ್ದರಿಂದ ಮಾತುಕತೆ ವಿಫಲವಾಗಿತ್ತು.
ಗಡಿಭಾಗದ ರೈತರಿಂದ ಧರಣಿ
`ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ ಮತ್ತು ಸತಾರ ಜಿಲ್ಲೆಗಳ
ರೈತರು `ದಕ್ಷಿಣ ಮಹಾರಾಷ್ಟ್ರ ಬಂದ್' ಆಚರಿಸಲಾಗುವುದು.
ಕರ್ನಾಟಕದ ನಿಪ್ಪಾಣಿಯಲ್ಲಿ ರಸ್ತೆ ತಡೆ ನಡೆಸಲಿದ್ದು, ತೀವ್ರವಾದ
ಹೋರಾಟ ನಡೆಸಲಾಗುವುದು' ಎಂದು ಶೇತ್ಕರಿ ಸಂಘಟನ್(ರೈತ
ಸಂಘಟನೆ) ಹೇಳಿದೆ. ಮಹಾರಾಷ್ಟ್ರದ ರಾಜಕೀಯದಲ್ಲಿ
ಪ್ರಮುಖಪಾತ್ರವಹಿಸುವ ಈ ಸಂಘಟನೆ ಮಹಾರಾಷ್ಟ್ರ ಸರ್ಕಾರಕ್ಕೆ
ಪ್ರತಿಟನ್ ಕಬ್ಬಿಗೆ ೧,೮೦೦ ರಿಂದ ೨,೨೦೦ ರೂ. ಗಳ ಬೇಡಿಕೆ ಇಟ್ಟಿದೆ.
ಇನ್ನಷ್ಟು
ಸ್ಯಾಮ್ ಪಿತ್ರೋಡಗೆ `ದಿ ಎಕಾನಾಮಿಸ್ಟ್' ನಿಂದ ಗೌರವ
ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ
ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ
ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ
ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ
|