|
ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ
ನವದೆಹಲಿ: ಬಾಲಿವುಡ್‌ನ ಪ್ರಖ್ಯಾತ ಗಾಯಕಿ ಲತಾ
ಮಂಗೇಶ್ಕರ್ ಅವರನ್ನು ಫ್ರಾನ್ಸ್ ಉನ್ನತ ಸಾಧನೆ ಮಾಡಿದ
ನಾಗರೀಕರಿಗೆ ನೀಡಲಾಗುವ `ನೈಟ್ ಆಫ್ ಲಿಜನ್ ಅವಾರ್ಡ್'ಗೆ ಆಯ್ಕೆ
ಮಾಡಿದೆ.
ತಮ್ಮ ೫ ದಶಕಗಳ ದೀರ್ಘ ಸಿನೆಮಾ ಜೀವನದಲ್ಲಿ ೫೦ ಸಾವಿರಕ್ಕೂ
ಹೆಚ್ಚು ಹಾಡನ್ನು ಹಾಡಿರುವ ಲತಾ, ಚಿತ್ರ ಜಗತ್ತಿಗೆ ಸಲ್ಲಿಸಿದ ಅಮೋಘ
ಸೇವೆಗಾಗಿ ಈ ಪ್ರಶಸ್ತಿ ಪಡೆಯುತ್ತಿದ್ದಾರೆ.

ಫ್ರೆಂಚ್‌ದ ಭಾರತ ರಾಯಭಾರಿ ಡೊಮಿನಿಕ್ ಗೆರಾರ್ಡ್ ಮುಂದಿನ
ತಿಂಗಳು ಮುಂಬೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ
ಪ್ರಶಸ್ತಿಯನ್ನು ಲತಾ ಅವರಿಗೆ ನೀಡಿ ಸನ್ಮಾನಿಸಲಿದ್ದಾರೆ.
ಹಿಂದಿನ ತಿಂಗಳು ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ
ಹೆಸರನ್ನು ಈ ಪ್ರಶಸ್ತಿಗಾಗಿ ಘೋಷಿಸಲಾಗಿತ್ತು. ಅನುಭವಿ ಬಂಗಾಳಿ ಚಿತ್ರ
ನಿರ್ದೇಶಕ ಸತ್ಯಜಿತ್ ರೇ ಅವರೂ `ನೈಟ್ ಆಫ್ ಲಿಜನ್ ಅವಾರ್ಡ್'ಗೆ
ಭಾಜನರಾಗಿದ್ದರು.
ಇನ್ನಷ್ಟು
ಸ್ಯಾಮ್ ಪಿತ್ರೋಡಗೆ `ದಿ ಎಕಾನಾಮಿಸ್ಟ್' ನಿಂದ ಗೌರವ
ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ
ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ
ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ
ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ
|