|
ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ
ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ನವೆಂಬರ್ ೧೫ರಂದು
ಚಿತ್ರೋದ್ಯಮದ ಎಲ್ಲ ವಿಭಾಗದ ಮುಖ್ಯಸ್ಥರನ್ನು ಕರೆದು ಸಭೆ
ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ.
ಕುಮಾರಸ್ವಾಮಿ ಹೇಳಿದ್ದಾರೆ.
ಭಾನುವಾರ ನಡೆದ ಉದಯಟಿವಿ ಸನ್ ಫೀಸ್ಟ್ ಪ್ರಶಸ್ತಿ ಪ್ರಧಾನ
ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ಈ ಭರವಸೆ
ನೀಡಿರುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
ತಲ್ಲಂ ನಂಜುಡ ಶೆಟ್ಟಿ ಹೇಳಿದ್ದಾರೆ.

ಕರ್ನಾಟಕ ಚಲನಚಿತ್ರ ಕಾರ್ಮಿಕರ ತಂತ್ರಜ್ಞರ, ಕಲಾವಿದರ ಒಕ್ಕೂಟದ
೧೫ ಸಂಘಗಳಿಗೆ ಅಧ್ಯಕ್ಷರಾಗಿ ಅಶೋಕ್ ಮತ್ತೆ ಅವಿರೋಧವಾಗಿ
ಆಯ್ಕೆಯಾಗಿದ್ದಾರೆ.
ಅಶೋಕ ಅವರನ್ನು ಬಿಟ್ಟು ಬರುವಂತೆ ಕಾರ್ಮಿಕರಿಗೆ ನಿರ್ಮಾಪಕರು ಮಾಡಿದ
ಮನವಿಯನ್ನು ಕಾರ್ಮಿಕ ಒಕ್ಕೂಟ ತಿರಸ್ಕರಿದ್ದು ಸಮಸ್ಯೆಗೆ
ಕಾರಣವಾಗಿತ್ತು.
ಚಿತ್ರರಂಗದ ಬಿಕ್ಕಟ್ಟನ್ನು ಶೀಘ್ರವಾಗಿ ಬಗೆಹರಿಸಲಾಗುವುದು ಎಂದು
ಕೇಂದ್ರ ವಾರ್ತಾ ಸಚಿವ ಅಂಬರೀಷ್ ಕೂಡ ಭರವಸೆ ನೀಡಿದ್ದಾರೆ.
ಇನ್ನಷ್ಟು
ಸ್ಯಾಮ್ ಪಿತ್ರೋಡಗೆ `ದಿ ಎಕಾನಾಮಿಸ್ಟ್' ನಿಂದ ಗೌರವ
ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ
ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ
ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ
ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ
|