|
ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!
ಬೆಳಗಾವಿ: ಬೆಳಗಾವಿ ಗಡಿವಿವಾದ ಇನ್ನೂ ಬಗೆ ಹರಿದಿಲ್ಲ ಆಗಲೇ
ಕಾರವಾರ-ಗೋವಾ ಗಡಿಯ ವಿವಾದ ಪ್ರಾರಂಭವಾಗುವ ಲಕ್ಷಣ
ಕಾಣಿಸುತ್ತಿದೆ. ಕಾರವಾರ ಮತ್ತು ಜೋಯಿಡಾ ತಾಲೂಕಿನ
ಕೊಂಕಣಿಪ್ರಿಯ ಜನರು ಇವೆರಡೂ ತಾಲೂಕುಗಳು ಗೋವಾ ರಾಜ್ಯಕ್ಕೆ
ಸೇರಬೇಕು ಎಂದು ಒತ್ತಾಯಿಸಿದ್ದಾರೆ. ಈ ತಾಲ್ಲೂಕುಗಳಲ್ಲಿ
ಶೇ.೬೦ರಷ್ಟು ಕೊಂಕಣಿ ಮಾತನಾಡುವ ಜನರಿದ್ದು, ಅವರು
ಕೊಂಕಣಿಯನ್ನು ತಮ್ಮ ಮಾತ್ರಭಾಷೆಯನ್ನಾಗಿ ಸ್ವೀಕರಿಸಿದ್ದಾರೆ.
ಕಾರವಾರ ಕೊಂಕಣಿಗರು ೧೯೯೨ರಲ್ಲೇ `ಸಂಯುಕ್ತ ಗೋಮಂತಕ್
ಮಂಚ್' ಎನ್ನುವ ಸಂಘಟನೆಯನ್ನು ರಚಿಸಿಕೊಂಡು ರಾಷ್ಟ್ರಪತಿ
ಮತ್ತು ಪ್ರಧಾನಮಂತ್ರಿ ಮತ್ತು ಗೋವಾ ಮುಖ್ಯಮಂತ್ರಿಗಳಿಗೆ
ಕಾರವಾರ ತಾಲ್ಲೂಕು ಗೋವಾದಲ್ಲಿ ವಿಲೀನಗೊಳಿಸಬೇಕು ಎಂದು ಮನವಿ
ಸಲ್ಲಿಸಿದ್ದರು. ಈ ಆಂದೋಲನವನ್ನು ತೀವ್ರಗೊಳಿಸಲು ಕಳೆದ
ಸೆಪ್ಟೆಂಬರ್ ೧ರಂದು ಸದಾಶಿವಗಡದಲ್ಲಿ ಕಾರವಾರ ಮತ್ತು ಜೋಯಿಡಾ
ಕೊಂಕಣಿಗರು ಸಭೆ ಸೇರಿ `ಸಂಯುಕ್ತ ಗೋಮಂತಕ್ ಮಂಚ್'ಗೆ
`ಗೋವಾ ಕೊಂಕಣಿ ರಾಜ್ಯ ಏಕೀಕರಣ ಮಂಚ್(ಜಿಕೆಆರ್‌ಇಎಂ)' ಎಂದು
ಪುನರ್ ನಾಮಕರಣ ಮಾಡಿದ್ದರು.
`೧೯೯೨ರಲ್ಲಿ ಕೊಂಕಣಿ ಭಾಷೆಗೆ ೮ನೇ ಅನುಬಂಧದಲ್ಲಿ ಸ್ಥಾನ
ಸಿಕ್ಕಿದ ತಕ್ಷಣವೇ ನಮ್ಮ ಆಂದೋಲನ ಪ್ರಾರಂಭವಾಗಿತ್ತು. ನಮ್ಮ
ಬೇಡಿಕೆಯನ್ನು ಮುಂದಿಡಲು ಇದು ಒಳ್ಳೆಯ ಸಮಯವಾಗಿದೆ.
ಕಾರವಾರ ಜೋಯಿಡಾ ತಾಲ್ಲೂಕುಗಳು ಗೋವಾಕ್ಕೆ ಸೇರುವುದರಿಂದ
ಕರ್ನಾಟಕ ಮತ್ತು ಗೋವಾ ಎರಡೂ ರಾಜ್ಯಗಳಿಗೆ ಅನೂಕೂಲವಾಗಲಿದೆ'
ಎಂದು ಜಿಕೆಆರ್‌ಇಎಂನ ಸಂಚಾಲಕಿ ಆಶಾ ಪಾಲಂಕರ್ ಹೇಳಿದ್ದಾರೆ.
ಜಿಕೆಆರ್‌ಇಎಂನ ಆಂದೋಲನಕ್ಕೆ ಇನ್ನಿತರ ಕೊಂಕಣಿ ಸಂಘಟನೆಗಳು
ಕೂಡಾ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ.
ಇನ್ನಷ್ಟು
ಸ್ಯಾಮ್ ಪಿತ್ರೋಡಗೆ `ದಿ ಎಕಾನಾಮಿಸ್ಟ್' ನಿಂದ ಗೌರವ
ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ
ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ
ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ
ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ
|