Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 14 November 2006 03:22 PM

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಅಧಿವೇಶನದಲ್ಲಿ ಹೋರಾಟ

 

ಮಂಡ್ಯ: ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಮಾನ ಕೊಡಬೇಕೆಂದು ಒತ್ತಾಯಿಸಿ ಸಂಸತ್ತಿನ ಚಳಿಗಾಲದ ಅಧಿ ವೇಶನದಲ್ಲಿ ಹೋರಾಟ ನಡೆಸುವುದಾಗಿ ಚಾಮರಾಜನಗರ ಕ್ಷೇತ್ರದ ಸಂಸದ ಕಾಗಲವಾಡಿ ಶಿವಣ್ಣ ತಿಳಿಸಿದರು.
 

`ನ. ೨೨ರಿಂದ ಆರಂಭಗೊಳ್ಳುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಇತರೆ ಸಂಸದರ ಸಹಕಾರದೊಂದಿಗೆ ಈ ಹೋರಾಟಕ್ಕೆ ಚಾಲನೆ ನೀಡಲಾಗುವುದು' ಎಂದು ಸಚಿವರು ಹೇಳಿದರು.
 

ಬೇಡಿಕೆಗೆ ಮಣಿಯದಿದ್ದರೆ ಸಂಸತ್ ಭವನದ ಎದುರು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಅಂಬರೀಶ್ ಅವರು ಈಗ ಕೇಂದ್ರ ಸಚಿವರಾಗಿರುವುದರಿಂದ ತಮ್ಮ ಹೋರಾಟಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದು ಹೇಳಿದರು.

 

ತಮಿಳು ಭಾಷೆಗೆ `ಶಾಸ್ತ್ರೀಯ ಭಾಷೆ' ಸ್ಥಾನ ನೀಡಿರುವುದಕ್ಕೆ ಅಭ್ಯಂತರವೇನೂ ಇಲ್ಲ. ೨,೫೦೦ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡುವುದು ಅಗತ್ಯವಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ವಪಕ್ಷದ ನಿಯೋಗವು ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ಒತ್ತಾಯಿಸಿ ಮತ್ತೊಮ್ಮೆ ಪ್ರಧಾನಿಗೆ ಮನವಿ ಸಲ್ಲಿಸಬೇಕೆಂದು ಅವರು ಸಲಹೆ ನೀಡಿದರು.

 
ಇನ್ನಷ್ಟು

 

ಸ್ಯಾಮ್ ಪಿತ್ರೋಡಗೆ `ದಿ ಎಕಾನಾಮಿಸ್ಟ್' ನಿಂದ ಗೌರವ

ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ

ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ

ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ

ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ

ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ

ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com