Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 13 November 2006 03:06 PM

ಹೊರರಾಜ್ಯದ ಕನ್ನಡ ಸಂಘಟನೆಗಳಿಂದ ವಿವಿಧ ಸ್ಪರ್ಧೆಗಳು

ಮುಂಬೆಳಕು ಕನ್ನಡ ಬಳಗದಿಂದ ಲಲಿತ ಪ್ರಬಂಧಕ್ಕಾಗಿ ಅಹ್ವಾನ

 

ಕಲ್ಯಾಣ್: ಮುಂಬಯಿಯಲ್ಲಿನ `ಮುಂಬೆಳಕು ಕನ್ನಡ ಬಳಗ'ವು ಸುವರ್ಣ ಕರ್ನಾಟಕ ಮಹೋತ್ಸವದ ಅಂಗವಾಗಿ `ಮುಂಬೆಳಕು ಸಾಹಿತ್ಯ ಪ್ರಶಸ್ತಿ'ಗಾಗಿ ಡಾ. ಯು.ಆರ್. ಅನಂತಮೂರ್ತಿಯವರ ಹೆಸರಿನಲ್ಲಿ ಲಲಿತ ಪ್ರಬಂಧಗಳನ್ನು ಆಹ್ವಾನಿಸಿದೆ.

ನಿಯಮಗಳು:
ಪ್ರಬಂಧವು ೧೨೦ ಪುಟಗಳನ್ನು ಮೀರಬಾರದು.

ಪ್ರಬಂಧವು ಸ್ವರಚಿತವಾಗಿರಬೇಕು.

ಪ್ರವೇಶಧನ ೧೦೦ ರೂ.ಗಳನ್ನು ಮುಂಬೆಳಕು ಕನ್ನಡ ಬಳಗದ ಹೆಸರಿಗೆ ಡಿಡಿ/ಎಂ.ಓ ಮೂಲಕ ಕಳುಹಿಸಬೇಕು.

ಪ್ರಶಸ್ತಿಯು ೩ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
ಲಲಿತ ಪ್ರಬಂಧದ ಜೊತೆಗೆ ಹೆಸರು ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಡಿಸೆಂಬರ್ ೧೫ರ ಒಳಗೆ ಕಳಿಸಬೇಕು.

ಪ್ರಬಂಧಗಳು ಈ ಮುಂಚೆ ಎಲ್ಲೂ ಪ್ರಕಟವಾಗಿರಬಾರದು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಡಾ. ಕೆ. ರಘುನಾಥ
ಕಾರ್ಯದರ್ಶಿ, ಮುಂಬೆಳಕು ಕನ್ನಡ ಬಳಗ
ಡಿ/೬/೨೦೩, ಹಿಮಗಿರಿ ಸಿಎಚ್‌ಎಸ್,
ಲೋಕಧಾರಾ, ಕಲ್ಯಾಣ್-೪೨೧ ೩೦೬
ದೂ: ೨೩೫೨೩೩೦.

***


ಡಾ. ಜಿ.ಬಿ. ಜೋಷಿ ಪ್ರತಿಷ್ಠಾನದಿಂದ ಪ್ರಬಂಧ ಸ್ಪರ್ಧೆ

 

ಮುಂಬಯಿ: ಡಾ. ಜಿ.ಬಿ. ಜೋಷಿ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನವು ಲಲಿತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.

 

೮-೧೦ ಪುಟ ಮೀರದಂತೆ ಫುಲ್ ಸ್ಕೇಪ್ ಹಾಳೆಯ ಒಂದೇ ಮಗ್ಗಲಲ್ಲಿ ಪ್ರಬಂಧವನ್ನು ಬರೆದಿರಬೇಕು.

 

ಪ್ರವೇಶ ಶುಲ್ಕವಿರುವುದಿಲ್ಲ. ಪ್ರಬಂಧವು ಸ್ವರಚಿತವಾಗಿರಬೇಕು. ಪ್ರಬಂಧಗಳು ಈ ಮುಂಚೆ ಎಲ್ಲೂ ಪ್ರಕಟವಾಗಿರಬಾರದು.

 

ಪ್ರಬಂಧಗಳು ಡಿಸೆಂಬರ್ ೧೫ರ ಒಳಗೆ ಕಳಿಸಬೇಕು.

ಪ್ರಬಂಧವನ್ನು ಈ ವಿಳಾಸಕ್ಕೆ ಕಳಿಸಿ:
ಪ್ರೊ. ವೆಂಕಟೇಶ್ ಪೈ,
ಕಾರ್ಯದರ್ಶಿ, ಡಾ. ಜಿ.ಬಿ. ಜೋಷಿ ಪ್ರತಿಷ್ಠಾನ
ಉಮಾ ಕೃಪಾ, ಮಂಜುನಾಥ ವಿದ್ಯಾಲಯ ಮುಂಭಾಗ
ಕಲ್ಯಾಣ ರಸ್ತೆ, ಗೋಪಾಲ ನಗರ
ದೊಂಬಿವಿಲಿ-೪೨೧ ೨೦೧

***


`ದರ್ಪಣ' ಮಾಸ ಪತ್ರಿಕೆಯಿಂದ ಬರಹಗಳಿಗೆ ಆಹ್ವಾನ

 

ಪಣಜಿ: ಸುವರ್ಣ ಕರ್ನಾಟಕ ಮಹೋತ್ಸವದ ಅಂಗವಾಗಿ ಗೋವಾದಿಂದ ಪ್ರಕಟವಾಗುವ `ದರ್ಪಣ' ಕನ್ನಡ ಮಾಸ ಪತ್ರಿಕೆಯು ವಿಶೇಷಾಂಕ ಪ್ರಕಟಿಸಲಿದೆ.
 

ಏಕೀಕರಣಕ್ಕೆ ಸಂಬಂಧಿಸಿದ ಲೇಖನ, ಕಥೆ, ಕವನ, ಚುಟುಕ ಹಾಗೂ ವ್ಯಂಗಚಿತ್ರಗಳನ್ನು ಆಹ್ವಾನಿಸಲಾಗಿದೆ.
 

ಆಸಕ್ತರು ನವೆಂಬರ್ ೩೦ರ ಒಳಗಾಗಿ ಬರಹಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳಿಸಿ:
ಸಂಪಾದಕರು
 

ಗೋವಾ ದರ್ಪಣ
ಅಂಚೆ ಪೆಟ್ಟಿಗೆ ಸಂಖ್ಯೆ ೩೮,
ಪಣಜಿ-೪೦೩೦೧
ಗೋವಾ.
 

ಇನ್ನಷ್ಟು

ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!

ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ

ಹುಬ್ಬಳ್ಳಿ ಕಡೆಗೆ ಕಿಂಗ್ ಫಿಷರ್ ಹಾರಾಟ

ಸರ್ಕಾರಿ ನೌಕರರಿಗೆ `ಆಡಳಿತ ಕನ್ನಡ' ಪಾಠ

ಸ್ಯಾಮ್ ಪಿತ್ರೋಡಗೆ ದಿ ಎಕಾನಾಮಿಷ್ಟ್ ನಿಂದ ಗೌರವ

ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ

ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ

ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ

ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ

ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ

ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com