|
ಸರ್ಕಾರಿ ನೌಕರರಿಗೆ `ಆಡಳಿತ ಕನ್ನಡ' ಪಾಠ
ಬೆಂಗಳೂರು: ರಾಜ್ಯದ ಆಡಳಿತದಲ್ಲಿ ಕನ್ನಡವನ್ನು
ಕಡ್ಡಾಯಗೊಳಿಸುವ ದಿಶೆಯಲ್ಲಿ `ಕನ್ನಡ ಅಭಿವೃದ್ಧಿ ಪ್ರಾಧಿಕಾರ'ದ
ಸಹಯೋಗದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಸರ್ಕಾರಿ
ನೌಕರರಿಗೆ ದೂರಶಿಕ್ಷಣದ ಮೂಲಕ `ಆಡಳಿತ ಕನ್ನಡ' ಪಾಠವನ್ನು
ನೀಡಲು ಯೋಜಿಸುತ್ತಿದೆ.
`ಕರ್ನಾಟಕದಲ್ಲಿ ಆಡಳಿತದ ಎಲ್ಲಾ ಹಂತಗಳಲ್ಲೂ ಏಕರೂಪದ ಆಡಳಿತ
ಕನ್ನಡವನ್ನು ಅನುಷ್ಠಾನಕ್ಕೆ ತರುವುದು ಈ ಯೋಜನೆಯ
ಉದ್ದೇಶವಾಗಿದೆ. ಆಡಳಿತ ಕನ್ನಡ ಕೋರ್ಸ್‌ಲ್ಲಿ ಉತ್ತೀರ್ಣರಾದ ನೌಕರರಿಗೆ
ಬಡ್ತಿ, ವೇತನ ಹೆಚ್ಚಿಸುವ ಮೂಲಕ ಉತ್ತೇಜನ ನೀಡಬೇಕೆಂದು ಕೋರಿ
ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ' ಎಂದು ಪ್ರಾಧಿಕಾರದ
ಅಧ್ಯಕ್ಷ ಡಾ. ಸಿದ್ಧಲಿಂಗಯ್ಯ ಹೇಳಿದ್ದಾರೆ.
`ಈ ರೀತಿ ಉತ್ತೇಜನ ನೀಡುವುದರಿಂದ ನೌಕರರು ಕನ್ನಡ ಕಲಿಯಲು
ಮುಂದೆ ಬರುತ್ತಾರೆ ಮತ್ತು ಆಗ ತನ್ನಿಂತಾನೆ ಆಡಳಿತದಲ್ಲಿ
ಕನ್ನಡವು ಜಾರಿಗೆ ಬರುತ್ತದೆ' ಎಂದು ಡಾ. ಸಿದ್ಧಲಿಂಗಯ್ಯ
ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.
ಈ ಕೋರ್ಸ್ ಅಧಿಕೃತ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ.
ಇದು ೧೦ ತಿಂಗಳ ಕೋರ್ಸ್ ಆಗಿದ್ದು ಕನ್ನಡದಲ್ಲೇ ಅಧಿಸೂಚನೆ,
ಸುತ್ತೋಲೆ ಹೊರಡಿಸುವುದು, ಪಾರಿಭಾಷಿಕ ಪದಗಳ ಬಳಕೆ
ಮುಂತಾದುವುಗಳನ್ನು ಒಳಗೊಂಡಿರುತ್ತದೆ.
ಹಂಪಿ ವಿಶ್ವವಿದ್ಯಾಲಯವು `ಆಡಳಿತ ಕನ್ನಡ' ಕೋರ್ಸ್‌ಗೆ
ಅಗತ್ಯವಿರುವ ಪಠ್ಯಕ್ರಮ ಸೇರಿದಂತೆ ಎಲ್ಲಾ ರೀತಿಯ
ಪೂರ್ವತಯಾರಿಯನ್ನು ಈಗಾಗಲೆ ಮಾಡಿಕೊಂಡಿದೆ.
ಇನ್ನಷ್ಟು
ಸ್ಯಾಮ್ ಪಿತ್ರೋಡಗೆ `ದಿ ಎಕಾನಾಮಿಸ್ಟ್' ನಿಂದ ಗೌರವ
ರಾಜ್ಯದಿಂದ ಏಫ್೧ ರೇಸ್ ಟ್ರಾಕ್‌ಗಾಗಿ ಅರ್ಜಿ
ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ
ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ
ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ
|