|
ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ
ಬೆಂಗಳೂರು: `ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳದಂತಿರಲು
ಅಂತರ್ಜಾಲದ ಮೂಲಕ ವಂಚಕರ ಪತ್ತೆಹಚ್ಚಲಾಗುವುದು' ಎಂದು
ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದರು. ಅವರು
ಬೆಂಗಳೂರಿನಲ್ಲಿ ಶನಿವಾರ ದೇಶದ ಮೊತ್ತಮೊದಲ `ಅತಿಹೆಚ್ಚು ತೆರಿಗೆ
ಪಾವತಿಸುವವರ ಘಟಕ(ಎಲ್‌ಟಿಯು)'ವನ್ನು ಉದ್ಘಾಟಿಸಿ
ಮಾತನಾಡುತ್ತಿದ್ದರು.
ಚಿದಂಬರಂ ಸಮಾರಂಭದಲ್ಲಿ ಹೇಳಿದ ವಿಷಯಗಳು ಇಂತಿವೆ:
ವಿದೇಶಗಳಂತೆ
ನಮ್ಮ ದೇಶದಲ್ಲೂ ಪ್ರಜೆಗಳು ಸ್ವಯಂ ಸ್ಫೂರ್ತಿಯಿಂದ ತೆರಿಗೆ
ಸಲ್ಲಿಸಬೇಕು.
ಬೆಂಗಳೂರಿನ
ಮಾದರಿಯಂತೆ ಮುಂಬೈ, ಕೋಲ್ಕತ್ತಾ, ಚೆನ್ನೈ, ನವದೆಹಲಿಗಳಲ್ಲಿ
ಕೂಡಾ `ಎಲ್‌ಟಿಯು'ಗಳನ್ನು ತೆರೆಯಲಾಗುವುದು.
ಸುಮಾರು
೫ ಕೋಟಿಗಿಂತಲೂ ಹೆಚ್ಚು ತೆರಿಗೆ ಪಾವತಿಸುವವರು ಎಲ್‌ಟಿಯುದ
ಸದಸ್ಯರಾಗಬಹುದು.
ಬೆಂಗಳೂರಿನಲ್ಲಿ
೯೩ ಕಂಪೆನಿಗಳು ೫ ಕೋಟಿಗಿಂತಲೂ ಹೆಚ್ಚು ತೆರಿಗೆಯನ್ನು
ಪಾವತಿಸುತ್ತಿದ್ದರೂ ಇವರಲ್ಲಿ ೩೧ ಕಂಪೆನಿಗಳು ಮಾತ್ರ ಎಲ್‌ಟಿಯು
ಸದಸ್ಯ ಆಗಿವೆ. ಉಳಿದವರು ಯಾಕೆ ಸದಸ್ಯತ್ವ ಪಡೆದಿಲ್ಲ ಎಂಬುದಕ್ಕೆ
ಕಾರಣವನ್ನು ಅಧಿಕಾರಿಗಳು ಪರಿಶೀಲಿಸಬೇಕು.
ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರನ್ನು ಅಧಿಕಾರಿಗಳು
ಗೌರವಿಸಬೇಕು ಎಂದು ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಕಿವಿಮಾತನ್ನೂ
ಇದೇ ಸಂದರ್ಭದಲ್ಲಿ ಚಿದಂಬರಂ ಹೇಳಿದರು.
ಇನ್ನಷ್ಟು
ಡಿಎಸ್‌ಎ ನಿಯಂತ್ರಣ ವಿಫಲ: ಎಚ್‌ಡಿಎಫ್‌ಸಿಗೆ ನೋಟೀಸ್
ಆಸ್ಪತ್ರೆಯಿಂದ ಹೊರಬಂದ ಪ್ರಭಾಕರ ಕೋರೆ
ಹಂಪಿ ಪ್ರದೇಶ ಪ್ರಾಧಿಕಾರ ಯೋಜನೆ ಸಿದ್ಧ
ಸಂಪುಟದ ಒಪ್ಪಿಗೆಗೆ ಕಾದಿರುವ ವಿಧಾನ ಸೌಧ
ನವೆಂಬರ್ ೧೬ರಿಂದ ತಲಕಾಡಿನಲ್ಲಿ ಮಹಾ ಉತ್ಸವ
ಮೋದಿ ಸ್ಮರಣಾರ್ಥ ನೇತ್ರ ಚಿಕಿತ್ಸಾ ಶಿಬಿರ
ಗ್ರೇಟರ್ ಬೆಂಗಳೂರಿಗೆ ಸಾವಿರ ನೌಕರರ ಅಗತ್ಯ
ಸಲೀಂ ಅಲಿ ಜನ್ಮ ಶತಮಾನೋತ್ಸವ ಆಚರಣೆ
|