|
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ
ಪಣಜಿ: ಗೋವಾ ಸರ್ಕಾರ ಮೇಲಿಂದ ಮೇಲೆ ಮಾಡಿದ
ಮನವಿಯನ್ನು ಮನ್ನಿಸಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಎ.
ರಾಜ ಅವರು ಕರ್ನಾಟಕ ಸರ್ಕಾರಕ್ಕೆ ತಕ್ಷಣ ಕಳಸಾ- ಬಂಡೂರಿ
ಯೋಜನೆಯನ್ನು ನಿಲ್ಲಿಸಲು ಹೇಳಿದ್ದಾರೆ.
ಮಹಾದಾಯಿ ಜಲಾನಯನ ಭೂ ಪ್ರದೇಶದಲ್ಲಿ ಉದ್ದೇಶಿತ ಕಳಸಾ
-ಬಂಡೂರಿ ನಾಲೆ ಯೋಜನೆಯನ್ನು ಕರ್ನಾಟಕ ಕೈಗೊಂಡಿದೆ. ಆದರೆ
ಕೇಂದ್ರ ಸರ್ಕಾರದಿಂದ ಶಾಸನಬದ್ಧವಾಗಿ ಒಪ್ಪಿಗೆ ಪಡೆಯದ ಹೊರತು
ಕಾಮಗಾರಿಯನ್ನು ಮುಂದುವರಿಸುವಂತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ
ಬರೆದಿರುವ ಪತ್ರದಲ್ಲಿ ಸಚಿವ ರಾಜ ತಿಳಿಸಿದ್ದಾರೆ.
ಸಚಿವ ರಾಜ ಅವರು ಈ ಪತ್ರದ ಪ್ರತಿಯನ್ನು ಕೇಂದ್ರ ನೀರಾವರಿ ಖಾತೆ
ಸಚಿವ ಸೈಫುದ್ದೀನ್ ಸೋಜ್ ಅವರಿಗೂ ಕಳಿಸಿ ಈ ವಿಷಯದಲ್ಲಿ
ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿದ್ದಾರೆ.
ಇನ್ನಷ್ಟು
ಡಿಎಸ್‌ಎ ನಿಯಂತ್ರಣ ವಿಫಲ: ಎಚ್‌ಡಿಎಫ್‌ಸಿಗೆ ನೋಟೀಸ್
ಆಸ್ಪತ್ರೆಯಿಂದ ಹೊರಬಂದ ಪ್ರಭಾಕರ ಕೋರೆ
ಹಂಪಿ ಪ್ರದೇಶ ಪ್ರಾಧಿಕಾರ ಯೋಜನೆ ಸಿದ್ಧ
ಸಂಪುಟದ ಒಪ್ಪಿಗೆಗೆ ಕಾದಿರುವ ವಿಧಾನ ಸೌಧ
ನವೆಂಬರ್ ೧೬ರಿಂದ ತಲಕಾಡಿನಲ್ಲಿ ಮಹಾ ಉತ್ಸವ
ಮೋದಿ ಸ್ಮರಣಾರ್ಥ ನೇತ್ರ ಚಿಕಿತ್ಸಾ ಶಿಬಿರ
ಗ್ರೇಟರ್ ಬೆಂಗಳೂರಿಗೆ ಸಾವಿರ ನೌಕರರ ಅಗತ್ಯ
ಸಲೀಂ ಅಲಿ ಜನ್ಮ ಶತಮಾನೋತ್ಸವ ಆಚರಣೆ
|