Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 12 November 2006 01:25 PM

ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ

 

ಬೆಂಗಳೂರು: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸಿಕೊಡುವಂತೆ ಕೇಂದ್ರದ ಮೇಲೆ ಒತ್ತಾಯ ಹೇರಲು ಡಿಸೆಂಬರ್ ೧೧ರಂದು ಕರ್ನಾಟಕದಾದ್ಯಂತ ಕರಾಳ ದಿನಾಚರಣೆಯನ್ನು ಆಚರಿಸಲು ಕರ್ನಾಟಕ ಗಡಿನಾಡು ಹೋರಾಟ ಸಮಿತಿ ನಿರ್ಧರಿಸಿದೆ. ಶಾಸಕರ ಭವನದಲ್ಲಿ ಶನಿವಾರ ಕನ್ನಡ ಸಂಘ ಮತ್ತು ಹೋರಾಟಗಾರರ ಸಭೆಯ ನಂತರ ಈ ತೀರ್ಮಾನ ಕೈಗೊಳ್ಳಲಾಯಿತು.
 

ಕರಾಳ ದಿನಾಚರಣೆಯದಂದು ಹೋಬಳಿ ಮಟ್ಟದಿಂದ ಹಿಡಿದು ರಾಜ್ಯದ ಮೂಲೆ ಮೂಲೆಗಳಲ್ಲಿ ಕನ್ನಡ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಪ್ಪು ಬಾವುಟ ಹಿಡಿದು ರಸ್ತೆ ತಡೆ ನಡೆಸಲಿದ್ದಾರೆ.
 

`ಕೇಂದ್ರದ ಮಂತ್ರಿಗಳು ರಾಜ್ಯಕ್ಕೆ ಭೇಟಿ ನೀಡಿದಾಗ ಬಹಿಷ್ಕಾರ ಹಾಕಲಾಗುವುದು. ನವೆಂಬರ್ ೧ರ ಒಳಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿ ಮಾತಿಗೆ ತಪ್ಪಿದ ಕೇಂದ್ರ ಸಚಿವ ಎಂ.ವಿ. ರಾಜಶೇಖರನ್ ಕೂಡಲೇ ರಾಜೀನಾಮೆ ಸಲ್ಲಿಸಬೇಕು' ಎಂದು ಶಾಸಕ ವಾಟಾಳ್ ನಾಗರಾಜ್ ತಿಳಿಸಿದರು.
 

ಕನ್ನಡ ಸೇನೆಯ ಅಧ್ಯಕ್ಷ ಕುಮಾರ್, ಗಡಿನಾಡು ಹೋರಾಟ ಸಮಿತಿ ಅಧ್ಯಕ್ಷ ಪ್ರಭಾಕರ ರೆಡ್ಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗಂಗು, ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಹೀಗೆ ಮುಂತಾದ ಕನ್ನಡಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.


ಇನ್ನಷ್ಟು

 

ಡಿಎಸ್‌ಎ ನಿಯಂತ್ರಣ ವಿಫಲ: ಎಚ್‌ಡಿಎಫ್‌ಸಿಗೆ ನೋಟೀಸ್

ಆಸ್ಪತ್ರೆಯಿಂದ ಹೊರಬಂದ ಪ್ರಭಾಕರ ಕೋರೆ

ಹಂಪಿ ಪ್ರದೇಶ ಪ್ರಾಧಿಕಾರ ಯೋಜನೆ ಸಿದ್ಧ

ಸಂಪುಟದ ಒಪ್ಪಿಗೆಗೆ ಕಾದಿರುವ ವಿಧಾನ ಸೌಧ

ನವೆಂಬರ್ ೧೬ರಿಂದ ತಲಕಾಡಿನಲ್ಲಿ ಮಹಾ ಉತ್ಸವ

ಮೋದಿ ಸ್ಮರಣಾರ್ಥ ನೇತ್ರ ಚಿಕಿತ್ಸಾ ಶಿಬಿರ

ಗ್ರೇಟರ್ ಬೆಂಗಳೂರಿಗೆ ಸಾವಿರ ನೌಕರರ ಅಗತ್ಯ

ಸಲೀಂ ಅಲಿ ಜನ್ಮ ಶತಮಾನೋತ್ಸವ ಆಚರಣೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com