Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 11 November 2006 12:29 PM

ಹೊಸ ಕೃಷಿ ನೀತಿಗೆ ಒಪ್ಪಿಗೆ ನೀಡಿದ ರಾಜ್ಯ ಸಂಪುಟ

 

ಬೆಂಗಳೂರು: ಶುಕ್ರವಾರ ಕರ್ನಾಟಕದ ಸಚಿವ ಸಂಪುಟ ಹೊಸ ಕೃಷಿ ನೀತಿಗೆ ಒಪ್ಪಿಗೆ ನೀಡಿದೆ. ಮತ್ತು ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳ ಪುನರ್ವಸತಿ ರೂಪಿಸುವ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ನಡೆಸಲು ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ.
 

ಸಭೆಯ ನಂತರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಸಚಿವರಾದ ಬಸವರಾಜ ಹೊರಟ್ಟಿಯವರು ಸುದ್ದಿಗಾರರಿಗೆ ಈ ಬಗ್ಗೆ ನೀಡಿದ ಸಂಕ್ಷಿಪ್ತ ವರದಿ ಹೀಗಿದೆ:
 

ಕೇಂದ್ರವು ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳ ಪುನರ್ವಸತಿ ರೂಪಿಸುವ ಯೋಜನೆಗಾಗಿ ೧,೫೬೮ ಕೋಟಿ ರೂ. ಸಹಾಯ ಧನ ಬಿಡುಗಡೆ ಮಾಡಿದೆ. ಸಾಲದ ರೂಪದಲ್ಲಿ ೧,೧೨೧ ಕೋಟಿ ರೂ. ರಾಜ್ಯದ ೬ ಜಿಲ್ಲೆಗಳಿಗೆ ನೀಡಿದೆ.

 

ಕೇಂದ್ರದ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿ ಬರಲು ಲೋಕೋಪಯೋಗಿ ಇಲಾಖೆಯ ಮಂತ್ರಿಯಾದ ಎಚ್. ಡಿ. ರೇವಣ್ಣ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಲಾಗುವುದು.
ಇದೇ ಸಭೆಯಲ್ಲಿ ೧.೪೨ ಲಕ್ಷ ಹೆಕ್ಟೇರು ಪ್ರದೇಶಗಳಿಗೆ ನೀರನ್ನು ಉಣಿಸಬಲ್ಲ ಭದ್ರಾ ಮೇಲ್ದಂಡೆ ಯೋಜನೆಗೂ ಒಪ್ಪಿಗೆ ನೀಡಲಾಯಿತು.

 

ಶಾಲಾ ಹೆಣ್ಣು ಮಕ್ಕಳಿಗೆ ಸೈಕಲ್ಲನ್ನು ನೀಡುವ ಯೋಜನೆಯನ್ನು ಗಂಡುಮಕ್ಕಳಿಗೆ ಕೂಡಾ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಯಿತು.

 

ಇನ್ನಷ್ಟು

ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ

ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ

ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್

ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ

ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್‍ಯಾಲಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com