|
ಶಾಲಾಭಿವೃದ್ಧಿ ಸಮಿತಿಗಳಿನ್ನು ರಾಜಕೀಯದಿಂದ ಮುಕ್ತ
ಬೆಂಗಳೂರು: ಆಯಾ ಶಾಲೆಗೆ ಹೋಗುತ್ತಿರುವ ಮಕ್ಕಳ
ಪಾಲಕರೇ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಗಳನ್ನು
ರಚಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸುವ ಮೂಲಕ ಶಿಕ್ಷಣ
ಕ್ಷೇತ್ರವನ್ನು ರಾಜಕೀಯದಿಂದ ಬೇರ್ಪಡಿಸುವ ಒಂದು ಉತ್ತಮ
ನಿರ್ಧಾರವನ್ನು ಕೈಗೊಂಡಿದೆ.
ನವೆಂಬರ್ ತಿಂಗಳ ಒಳಗೆ ಪುನಃ ಶಾಲಾಭಿವೃದ್ಧಿ ಸಮಿತಿಯನ್ನು ರಚಿಸಿ
ವರದಿ ಸಲ್ಲಿಸುವಂತೆ ಸರ್ಕಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ
ಕಟ್ಟುನಿಟ್ಟಾದ ಆದೇಶ ಮಾಡಿದೆ.
ಸರ್ಕಾರದ ಆದೇಶಗಳು ಇಂತಿದೆ:
ಸಮಿತಿಯ
ಸದಸ್ಯರಾಗುವವರ ಮಕ್ಕಳು ಆ ಶಾಲೆಯಲ್ಲಿ ವಿದ್ಯಾಭ್ಯಾಸ
ಮಾಡುತ್ತಿರಬೇಕು.
ಯಾವುದೇ
ನಾಮಕರಣವಿಲ್ಲದೆ ಚುನಾವಣೆಯ ಮೂಲಕವೇ ಸದಸ್ಯರ ಆಯ್ಕೆ
ಮಾಡಬೇಕು.
ಶಾಲೆಯ
ಮುಖ್ಯೋಪಾಧ್ಯಾಯರು ಕರೆದ ಪಾಲಕರ ಸಭೆಯಲ್ಲಿ ಸಮಿತಿಯ
ರಚನೆ ಆಗಬೇಕು.
ಈ ಆದೇಶದಿಂದ ರಾಜಕೀಯಕ್ಕಾಗಿ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ
ಸಮಿತಿಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಸಾಕಷ್ಟು
ಕಡಿಮೆ ಆಗಲಿದೆ.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್‍ಯಾಲಿ
|