|
ಅಮೇರಿಕಾದಲ್ಲಿ ಸತ್ತವರೂ ಚುನಾವಣೆಯಲ್ಲಿ ಗೆಲ್ಲಬಹುದು
ಇದೇನೂ ಇದು ಸಾಧ್ಯವೇ ಎಂದು ಹುಬ್ಬೇರಿಸಬೇಡಿ. ಭಾರತದಲ್ಲಿ
ಮಾತ್ರವಲ್ಲ. ಅಮೇರಿಕಾದಲ್ಲೂ ಇದು ಸಾಧ್ಯ
ಅಮೇರಿಕಾದ ಸಣ್ಣ ನಗರ ದಕ್ಷಿಣ ಡಕೋಟಾ ಕ್ಷೇತ್ರದಲ್ಲಿ ನಡೆದ
ಚುನಾವಣೆಯ ಮತಪತ್ರದಲ್ಲಿ ಸತ್ತ ಮಹಿಳೆಯ ಹೆಸರು
ದಾಖಲಾಗಿತ್ತು. ಜೊತೆಗೆ ಸತ್ತ ಮಹಿಳೆ ಚುನಾವಣೆಯನ್ನೂ ಕೂಡ
ಗೆದ್ದಿದ್ದಾರೆ.
ಮೇರಿ ಸ್ಟೈಕೆನ್ ಎಂಬ ಮಹಿಳೆ ಕಳೆದ ಸೆಪ್ಟೆಂಬರ್‌ನಲ್ಲಿ ಕ್ಯಾನ್ಸರ್
ನಿಂದ ಮೃತರಾಗಿದ್ದರು. ಆದರೆ ಡೆಮಾಕ್ರಾಟಿಕ್‌ನ ಈ ಅಭ್ಯರ್ಥಿ ತಮ್ಮ
ರಿಪೆಬ್ಲಿಕ್‌ನ ಪ್ರತಿಸ್ಪರ್ಧಿಗಿಂತ ೩೬ ಮತಗಳಿಂದ ಜಯಗಳಿಸಿದ್ದಾರೆ.
ಅಗಸ್ಟ್ ೧ರಂದು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಅಂತಿಮ
ಪಟ್ಟಿಯನ್ನು ಘೋಷಿಸಲಾಗಿತ್ತು. ಆದರೆ ಸ್ಟೈಕೆನ್ ಅವರ ಹೆಸರು
ಕಳೆದ ಮಂಗಳವಾರ ನಡೆದ ಚುನಾವಣೆಯ ಮತಪತ್ರದಲ್ಲಿ
ಹಾಗೇ ಉಳಿದಿತ್ತು.
ಸ್ಟೈಕೆನ್ ಮೃತರಾದ ಸುದ್ದಿ ಮತದಾರರಿಗೆ ಗೊತ್ತಿತ್ತು. ಆದರೂ
ಬದಲಾವಣೆ ಬಯಸಿದ ಜನತೆ ಅವರನ್ನು ಗೆಲ್ಲಿಸಿದೆ ಎಂದು ಚುನಾವಣೆ
ಕ್ಷೇತ್ರದ ಮೇಲ್ವಿಚಾರಕ ಸಿಂಡಿ ಪೀಟರ್ಸನ್ ಹೇಳಿದ್ದಾರೆ.
ಕಿರಿಕ್: ಇನ್ನು ಮೇಲೆ ಇಂಥಾ ಸುದ್ದಿ ಓದಿ `ಇಟ್ಸ್ ಹಾಪೇನ್ಸ್ ಓನ್ಲಿ ಇನ್
ಇಂಡಿಯಾ' ಅನ್ನೋ ಹಾಗಿಲ್ಲ.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್‍ಯಾಲಿ
|