|
ಭಯೋತ್ಪಾದಕರ ಭಯ, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
ನವದೆಹಲಿ/ಬೆಂಗಳೂರು: ಭಯೋತ್ಪಾದಕರ ಭಯದಿಂದ
ದಕ್ಷಿಣ ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ
ಭದ್ರತೆಯನ್ನು ಹೆಚ್ಚಿಸಲಾಗಿದೆ.
ಗುರುವಾರ ತಿರುಚಿರಾಪಳ್ಳಿಯಲ್ಲಿ ಚೆನ್ನೈ, ತಿರುಚಿನಾಪಳ್ಳಿ,
ಮಧುರೈ, ಕೊಯಂಬತ್ತೂರು, ತಿರುವನಂತಪುರಂಗಳಲ್ಲಿ ಬಾಂಬ್
ಸ್ಪೋಟಿಸುವ ಬೆದರಿಕೆಯುಳ್ಳ ಅನಾಮಧೇಯ ಪತ್ರ ಸಿಕ್ಕಿರುವ
ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
`ಅತ್ಯಂತ ಸೂಕ್ಷ್ಮ ವಿಮಾನ ನಿಲ್ದಾಣವಾಗಿರುವ ಬೆಂಗಳೂರು
ವಿಮಾನನಿಲ್ದಾಣದ ಬಗ್ಗೆ ಈ ಪತ್ರದಲ್ಲಿ ಯಾವುದೇ ಪ್ರಸ್ತಾಪ
ಆಗಿಲ್ಲವಾದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಭದ್ರತೆಯನ್ನು
ಹೆಚ್ಚಿಸಲಾಗಿದೆ. ವಿಮಾನ ಪ್ರಯಾಣಿಕರನ್ನಲ್ಲದೇ ನಿಲ್ದಾಣಕ್ಕೆ ಬರುವ
ವಾಹನಗಳನ್ನೂ ಪರೀಕ್ಷಿಸಲಾಗುತ್ತಿದೆ' ಎಂದು ಬೆಂಗಳೂರು ವಿಮಾನ
ನಿಲ್ದಾಣದ ನಿರ್ದೇಶಕ ನರೇಂದ್ರ ಕೌಶಾಲ್ ತಿಳಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ವಿಮಾನ ಸೇವೆ ಸಲ್ಲಿಸುತ್ತಿರುವ ಎಲ್ಲಾ ಖಾಸಗಿ
ವಿಮಾನ ಸಂಸ್ಥೆಗಳಿಗೂ ಕೂಡಾ `ಆಂಟಿ- ಹೈಜಾಕಿಂಗ್' ಮಾಪಕಗಳನ್ನು
ತೆಗೆದುಕೊಂಡು ಹೋಗಲು ಮತ್ತು ಪ್ರಯಾಣಿಕರು ಹಾಗೂ
ಲಗ್ಗೇಜುಗಳನ್ನು ಇನ್ನೂ ಸಮರ್ಪಕವಾಗಿ ಶೋಧಿಸಲು
ಕೇಳಿಕೊಳ್ಳಲಾಗಿದೆ.
ನಾಗರೀಕ ವಿಮಾನಯಾನ ನಿರ್ದೇಶಕರು(ಡಿಜಿಸಿಎ) ವಿಮಾನ ನಿಲ್ದಾಣದ
ರಕ್ಷಣಾ ವ್ಯವಸ್ಥೆ ಸಂಪೂರ್ಣ ಕಟ್ಟೆಚ್ಚರದಲ್ಲಿರಲು ಆದೇಶಿಸಿದ್ದಾರೆ.
ನಾಗರೀಕ ವಿಮಾನಯಾನ ಸಚಿವಾಲಯ ಈ ವಿಷಯವನ್ನು
ಗಂಭೀರವಾಗಿ ಪರಿಗಣಿಸಿದ್ದು ನಾಗರೀಕ ವಿಮಾನಯಾನ
ನಿರ್ದೇಶನಾಲಯದ ರಕ್ಷಣಾ ವಿಭಾಗದ ಅಧಿಕಾರಿಗಳ ಮತ್ತು ಕೇಂದ್ರ
ಕೈಗಾರಿಕಾ ರಕ್ಷಣಾ ದಳ(ಸಿಐಎಸ್‌ಎಫ್)ದ ಅಧಿಕಾರಿಗಳ ಸಭೆಯನ್ನು
ಕರೆಯಲಾಗಿದೆ.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್‍ಯಾಲಿ
|