|
ಭೂ ಕಬಳಿಸಿದ ಅಂಗಡಿಗಳಿಗೆ ಬೆಂ.ಮ.ಪಾ ಬೀಗ ಮುದ್ರೆ
ಬೆಂಗಳೂರು: ದೆಹಲಿಯಲ್ಲಿ ಅನಧಿಕೃತವಾಗಿ, ಭೂ ಕಬಳಿಕೆ
ಮಾಡಿದ ಅಂಗಡಿಗಳಿಗೆ ಬೀಗ ಮುದ್ರೆ ಹಾಕಿದ್ದರಿಂದ ಉಂಟಾದ ಗಲಭೆಯ
ಬಿಸಿ ಇನ್ನೂ ಆರಿಲ್ಲ. ಈಗ ಬೆಂಗಳೂರು ಮಹಾನಗರಪಾಲಿಕೆ ಕೂಡಾ ಇದೇ
ರೀತಿಯ ನಿರ್ಧಾರವನ್ನು ಕೈಗೊಂಡಿದೆ.
ಈಗಾಗಲೇ ಬೆಂಗಳೂರಿನ ಪ್ರತಿಷ್ಠಿತ ಸದಾಶಿವ ನಗರದಲ್ಲಿ ೩ ದಿನಗಳ
ಕಾರ್ಯಾಚರಣೆ ನಡೆಸಿ ೨೫ ಅಂಗಡಿಗಳಿಗೆ ಪಾಲಿಕೆ ಬೀಗ ಮುದ್ರೆ ಜಡಿದಿದೆ.
ಇನ್ನೂ ೧೦ ಅಂಗಡಿಗಳಿಗೆ ಬೀಗ ಜಡಿಯುವ ಸಾಧ್ಯತೆ ಇದೆ ಎಂದು
ಪಾಲಿಕೆಯ ಮೂಲಗಳು ತಿಳಿಸಿವೆ.
ಬಸವೇಶ್ವರ ನಗರ, ಜಯನಗರ, ಇಂದಿರಾನಗರ, ಬಿಟಿಎಂ ಬಡಾವಣೆ,
ಜೆಪಿ ನಗರ, ಗಂಗಾ ನಗರ, ಮಲ್ಲೇಶ್ವರ, ರಾಜಾಜಿನಗರ, ನಂದಿನಿ
ಬಡಾವಣೆ, ದೊಮ್ಮಲೂರು ಮುಂತಾದ ಕಡೆ ಭೂ ಕಬಳಿಸಿದ
ಅಂಗಡಿಗಳನ್ನು ಪಾಲಿಕೆ ಪತ್ತೆ ಮಾಡುತ್ತಿದ್ದು ಶೀಘ್ರದಲ್ಲಿಯೇ ಬೀಗ
ಮುದ್ರೆ ಹಾಕುವ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ.
ಪಾಲಿಕೆಯ ಈ ಕಾರ್ಯಾಚರಣೆಯ ವಿರುದ್ಧ ಅನೇಕ ಕಟ್ಟಡಗಳ
ಮಾಲೀಕರು ನ್ಯಾಯಾಲಯದ ಮೊರೆಹೋಗಿದ್ದಾರೆ.
ಬೆಂಗಳೂರಿನಲ್ಲಿ ೧೧ ಲಕ್ಷ ಅನಧಿಕೃತ ಕಟ್ಟಡಗಳಿದ್ದು ಪ್ರತಿವರ್ಷ
ಶೇ.೨೦ ಹೆಚ್ಚುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್‍ಯಾಲಿ
|