|
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ನವದೆಹಲಿ: ನೀರಾವರಿಯ ವಿಷಯ ರಾಜ್ಯಕ್ಕೆ ಸೇರಿದ್ದು,
ವಿವಾದಿತ ಕಳಸಾ-ಬಂಡೂರಿ ಯೋಜನೆಯಲ್ಲಿ ಮಧ್ಯ ಪ್ರವೇಶ
ಮಾಡದಿರಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಮಂಗಳವಾರ ಕೇಂದ್ರ ಜಲ ಸಂಪನ್ಮೂಲ ಸಚಿವ ಸೈಫುದ್ದೀನ್ ಸೋಜ್
ಭೇಟಿ ಮಾಡಿದ ರಾಜ್ಯ ಉಪಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ
ಈ ಮನವಿ ಮಾಡಿದರು.
ಹಿಂದೆ ಆಂಧ್ರಪ್ರದೇಶ-ಕರ್ನಾಟಕ ನಡುವಿನ `ತೆಲುಗು ಗಂಗಾ'
ಯೋಜನೆ ವಿವಾದದಲ್ಲಿ ಕೇಂದ್ರ ನೀರಾವರಿ ರಾಜ್ಯಕ್ಕೆ ಸಂಬಂಧಿಸಿದ
ವಿಷಯ ಎಂದು ಮಧ್ಯ ಪ್ರವೇಶ ಮಾಡಲು ನಿರಾಕರಿಸಿತು. ಇದೇ
ನಿಲುವನ್ನು `ಕಳಸಾ-ಬಂಡೂರಿ' ನಾಲೆ ವಿಷಯದಲ್ಲೂ
ತಳೆಯಬೇಕೆಂದು ಯಡಿಯೂರಪ್ಪ ಕೇಳಿಕೊಂಡರು.
ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಜೊತೆ ಸಚಿವ ಕಟ್ಟಾ
ಸುಬ್ರಮಣ್ಯ ನಾಯ್ಡು, ಜಗದೀಶ ಶೆಟ್ಟರ್, ಬಿಜೆಪಿ ಘಟಕ ಅಧ್ಯಕ್ಷ ಡಿ.
ವಿ. ಸದಾನಂದ ಗೌಡ, ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಷಿ
ಮತ್ತಿತರು ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಕುಡಿಯುವ ನೀರಿನ ಪೂರೈಕೆಗೆ
ಕರ್ನಾಟಕ ಜಾರಿತರಲು ಇಚ್ಛಿಸಿದ ಕಳಸಾ-ಬಂಡೂರಿ ನಾಲಾ ಯೋಜನೆಗೆ
ಗೋವಾ ರಾಜ್ಯ ಪ್ರತಿರೋಧಿಸುತ್ತಿದೆ.
ಇನ್ನಷ್ಟು
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್‍ಯಾಲಿ
ಪ್ರವಾಸೋದ್ಯಮಕ್ಕೆ ೨೫೦ ಕೋಟಿ ರೂ:ಡಿಸಿಎಂ
ಬೆಂಗಳೂರಿನ ಬಡ ಮಹಿಳೆಯರಿಗೆ ಚಿಕ್ಕ ಸಾಲ
ಆಂತರಿಕ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಬಿಜೆಪಿ ಸಭೆ
ಕಾಲೇಜು ಆವರಣಗಳಲ್ಲಿ
ತಂಬಾಕು ಉತ್ಪನ್ನಗಳಿಗೆ ಕೋಕ್
ಭಾಗ್ಯಲಕ್ಷ್ಮಿ ಯೋಜನೆಗೆ
ನವೆಂಬರ್ ೧೪ರಿಂದ ಜಾರಿಗೆ
ಸದ್ದಾಂ ಹುಸೇನ್‌ಗೆ ಗಲ್ಲು ಶಿಕ್ಷೆ
|