|
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ನಾರಾಯಣಮೂರ್ತಿ
ಬೆಂಗಳೂರು: `ಬ್ಯಾಂಗಲೂರ್'ನಿಂದ `ಬೆಂಗಳೂರು' ಎಂದು
ಹೆಸರು ಬದಲಾವಣೆ ಮಾಡುವುದರಲ್ಲಿ ಹೆಚ್ಚು ಸಮಯ ವ್ಯರ್ಥ
ಮಾಡುವ ಅಗತ್ಯವಿಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.
ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

`ನನ್ನ ಮಟ್ಟಿಗೆ ಹೆಸರು ಬದಲಾವಣೆ ಮಾಡುವುದು ಮಹತ್ವದಲ್ಲ.
ಕನ್ನಡಿಗರು ಮತ್ತು ಮನೆಯಲ್ಲಿ ಕನ್ನಡ ಮಾತನಾಡುವವರು
ಯಾವಾಗಲೂ ರಾಜಧಾನಿಯನ್ನು `ಬೆಂಗಳೂರು' ಎಂದೇ
ಕರೆಯುತ್ತಾರೆ. ಹೆಸರು ಬದಲಾವಣೆ ಮಾಡಲು ವ್ಯಯಿಸುತ್ತಿರುವ
ಶಕ್ತಿ, ತೋರುತ್ತಿರುವ ಉತ್ಸಾಹವನ್ನೇ ನಗರದ ಮೂಲಸೌಕರ್ಯ
ಸುಧಾರಣೆ, ರಸ್ತೆ ಸುರಕ್ಷತೆ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ
ತೋರಿಸಬೇಕು' ಎಂದು ನಾರಯಣ ಮೂರ್ತಿ ಆಶಿಸಿದ್ದಾರೆ.
`ಪ್ರತಿಯೊಬ್ಬ ಬೆಂಗಳೂರಿಗನ ಜೀವನ ಮಟ್ಟ ಸುಧಾರಣೆ ಬಗ್ಗೆ ನನ್ನ
ಸಮಯ ವ್ಯಯಿಸಲು ಬಯಸುತ್ತೇನೆ' ಎಂದು ನಾರಾಯಣಮೂರ್ತಿ
ಹೇಳಿದ್ದಾರೆ.
ಇನ್ನಷ್ಟು
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್‍ಯಾಲಿ
ಪ್ರವಾಸೋದ್ಯಮಕ್ಕೆ ೨೫೦ ಕೋಟಿ ರೂ:ಡಿಸಿಎಂ
ಬೆಂಗಳೂರಿನ ಬಡ ಮಹಿಳೆಯರಿಗೆ ಚಿಕ್ಕ ಸಾಲ
ಆಂತರಿಕ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಬಿಜೆಪಿ ಸಭೆ
ಕಾಲೇಜು ಆವರಣಗಳಲ್ಲಿ
ತಂಬಾಕು ಉತ್ಪನ್ನಗಳಿಗೆ ಕೋಕ್
ಭಾಗ್ಯಲಕ್ಷ್ಮಿ ಯೋಜನೆಗೆ
ನವೆಂಬರ್ ೧೪ರಿಂದ ಜಾರಿಗೆ
ಸದ್ದಾಂ ಹುಸೇನ್‌ಗೆ ಗಲ್ಲು ಶಿಕ್ಷೆ
|