|
ಬೆಂಗಳೂರಿನ ಬಡ ಮಹಿಳೆಯರಿಗೆ ಚಿಕ್ಕ ಸಾಲ
ಬೆಂಗಳೂರು: ಬೆಂಗಳೂರಿನಲ್ಲಿ ದುಡಿಯುತ್ತಿರುವ ಬಡ
ಮಹಿಳೆಯರಿಗೆ ಸುಮಾರು ೧ ಸಾವಿರ ಕೋಟಿ ರೂ. ಸಾಲದ ಅಗತ್ಯವಿದೆ
ಎಂದು `ಉಜ್ಜೀವನ್' ಎನ್ನುವ ಚಿಕ್ಕ ಮೊತ್ತದ ಸಾಲವನ್ನು ನೀಡುವ
ಸಂಸ್ಥೆ ಸಮೀಕ್ಷೆ ನಡೆಸಿ ಹೇಳಿದೆ.
ಮಾಸಿಕ ವರಮಾನ ೩ರಿಂದ ೭ ಸಾವಿರ ಇರುವ ಬೀಡಿ ಕಟ್ಟುವವರು,
ಅಗರಬತ್ತಿ ಹೊಸೆಯುವವರು, ಹಣ್ಣು ಮತ್ತು ತರಕಾರಿ ಬೀದಿ
ಬದಿಯಲ್ಲಿ ಮಾರುವವರು, ಪೆಟ್ಟಿಗೆ ಅಂಗಡಿ ಹೀಗೆ ಮುಂತಾದ ಚಿಕ್ಕ
ಪುಟ್ಟ ವ್ಯಾಪಾರ ಮಾಡುವ ಮಹಿಳೆಯರನ್ನು ಸಮೀಕ್ಷೆ ಮಾಡಿ ಈ
ಅಂಕಿ ಅಂಶವನ್ನು ಸಂಗ್ರಹಿಸಲಾಗಿದೆ.
ಈ ಮಹಿಳೆಯರು ದುಬಾರಿ ಬಡ್ಡಿ ನೀಡಿ ಲೇವಾದೇವಿಗಾರರಲ್ಲಿ ಸಾಲ
ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೇ ಬಹಳ ಆರ್ಥಿಕ ದುಸ್ಥಿತಿಯಲ್ಲಿದ್ದಾರೆ.
ಇಂಥ ಮಹಿಳೆಯರಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಸಣ್ಣ ಸಾಲ
ನೀಡುವುದಾಗಿ ಉಜ್ಜೀವನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ
ಸಮಿತ್ ಘೋಷ್ ತಿಳಿಸಿದ್ದಾರೆ.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|