|
ಕಾಲೇಜು ಆವರಣಗಳಲ್ಲಿ ತಂಬಾಕು ಉತ್ಪನ್ನಗಳಿಗೆ ಕೋಕ್
ಮೈಸೂರು: ಇನ್ನು ಮುಂದೆ ಕಾಲೇಜು ಆವರಣಗಳಲ್ಲಿ
ಸಿಗರೇಟು, ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ
ವಿಶ್ವ ವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ರಾಜ್ಯ
ಸರ್ಕಾರಗಳಿಗೆ ಆದೇಶ ನೀಡಿದೆ.
ಕಾಲೇಜು, ಡೀಮ್ಡ್ ವಿಶ್ವವಿದ್ಯಾಲಯಗಳ ನೂರು ಮೀಟರ್ ಆಸುಪಾಸಿನಲ್ಲಿ
ಜರ್ದಾ, ಬೀಡಾ, ಸಿಗರೇಟ್‌ಗಳಂತಹ ತಂಬಾಕು ಉತ್ಪನ್ನಗಳನ್ನು
ಮಾರಾಟ ಮಾಡುವಂತಿಲ್ಲ. ಈ ಕಾನೂನನ್ನು ಜಾರಿಗೊಳಿಸಲು ಸೂಚಿಸಿ
ಕೇಂದ್ರಾಡಳಿತ ಪ್ರದೇಶ, ರಾಜ್ಯ ಸರ್ಕಾರ, ವಿಶ್ವವಿದ್ಯಾಲಯದ
ಕುಲಪತಿಗಳಿಗೆ ಯುಜಿಸಿ ಸುತ್ತೋಲೆ ಕಳುಹಿಸಿದೆ.
ಇದಕ್ಕೆ ಪ್ರತಿಕ್ರಯಿಸಿದ ಉನ್ನತ ಶಿಕ್ಷಣ ಸಚಿವ ಡಿ. ಎಚ್. ಶಂಕರ
ಮೂರ್ತಿ `ಯುಜಿಸಿಯ ಈ ಕ್ರಮ ಉತ್ತಮವಾಗಿದೆ. ಶೀಘ್ರವಾಗಿ ಕಾನೂನು
ಜಾರಿ ಬರಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು' ಎಂದು
ಪ್ರತಿಕ್ರಿಯಿಸಿದ್ದಾರೆ.
ತಂಬಾಕು ಉತ್ಪನ್ನಗಳ ಮಾರಾಟವನ್ನು ಕಾಲೇಜುಗಳ ಸುತ್ತಮುತ್ತ
ನಿಷೇಧಿಸುವ ಕಾನೂನು ೨೦೦೪ರಲ್ಲೇ ಜಾರಿಗೆ ಬಂದಿದ್ದರೂ
ಪರಿಣಾಮಕಾರಿಯಾಗಿ ಜಾರಿ ಬಂದಿರಲಿಲ್ಲ.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|