|
ಸಿಕ್ಕಿ ಬಿದ್ದ ಜುಡಿತ್ ಬಿದ್ದಪ್ಪ
ಬೆಂಗಳೂರು: ಮಗ ಆಡಂ ಬಿದ್ದಪ್ಪನ ಅವಾಂತರದಲ್ಲಿ
ಪಾಲುದಾರಳಾಗಿ ಪೊಲೀಸರ ಕಣ್ಣು ತಪ್ಪಿಸಿಕೊಂಡಿದ್ದ ಜುಡಿತ್ ಬಿದ್ದಪ್ಪ
ಅವರನ್ನು ಅಶೋಕ್ ನಗರದ ಪೊಲೀಸರು ಶುಕ್ರವಾರ ಬಂಧಿಸಿ ಸ್ವಲ್ಪ
ಹೊತ್ತಿನ ನಂತರ ಬಿಡುಗಡೆ ಮಾಡಿದರು.
ಸೆಷನ್ಸ್ ನ್ಯಾಯಾಲಯದ ಆದೇಶದಂತೆ `ಬಂಧಿತಳು' ಎಂದು
ಕೇಸನ್ನು ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್ ೨೦ರಂದು ಆಡಂ ಬಿದ್ದಪ್ಪ
ಪೊಲೀಸರ ಮೇಲೆ ಹಲ್ಲೆ ಮಾಡಿ ಬಂಧಿತನಾದ ಘಟನೆಯಲ್ಲಿ ಆಡಂ
ತಾಯಿ ಜ್ಯೂಡಿತ್ ಬಿದ್ದಪ್ಪ ಕೂಡಾ ಪೊಲೀಸರ ಮೆಲೆ ಹಲ್ಲೆ ನಡೆಸಿ ತಲೆ
ಮರೆಸಿಕೊಂಡಿದ್ದರು. ಆ ಘಟನೆಯ ನಂತರ ಅವರು ಹೊರಗೆ
ಬಂದಿದ್ದು ನ. ೩ ರಂದೇ.
ಜ್ಯೂಡಿತ್‌ರನ್ನು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮತ್ತು
ಪೊಲೀಸರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ ಆರೋಪದ ಮೇಲೆ
ಬಂಧಿಸಲಾಗಿತ್ತು.
ಇನ್ನೊಂದೆಡೆ ನಗರದ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಆಡಂ ಬಿದ್ದಪ್ಪನ
ವಿಚಾರಣೆಯನ್ನು ಎಪ್ರೀಲ್ ೫, ೨೦೦೭ ಕ್ಕೆ ಮುಂದೂಡಿದ್ದಾರೆ.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|