Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 03 November 2006 04:00 PM

ಸೆಲ್‌ನಿಂದ ಗ್ಯಾಸ್ ಬುಕ್ಕಿಂಗ್:ರಿಲೆಯನ್ಸ್ ಕೊಡುಗೆ

 

ನವದೆಹಲಿ: ಇನ್ನು ಮುಂದೆ ರಿಲೆಯನ್ಸ್ ಮೊಬೈಲ್‌ನ ಸುಮಾರು ೨೬ ದಶಲಕ್ಷ ಗ್ರಾಹಕರು ಹೊಸ ರೀತಿಯ ಸೇವೆಯನ್ನು ಹೊಂದಲಿದ್ದಾರೆ.
 

ಅನಿಲ್ ಧೀರುಭಾಯ್ ಅಂಬಾನಿ ಗ್ರೂಪ್ಸ್‌ನ ರಿಲೆಯನ್ಸ್ ಕಮೂನಿಕೇಷನ್ಸ್ ಲಿಮಿಟೆಡ್(ಆರ್‌ಸಿಎಲ್) ರಾಷ್ಟ್ರವ್ಯಾಪಿಯಾಗಿ ಪ್ರಾರಂಭಿಸಿದ ಈ ಹೊಸ ಸೇವೆಯ ಮೂಲಕ ಗ್ರಾಹಕರು ಆರ್ ವರ್ಲ್ಡ್ ಮೂಲಕ ಅಡುಗೆ ಅನಿಲ(ಗ್ಯಾಸ್) ಬುಕ್ಕಿಂಗ್ ಮಾಡಬಹುದಾಗಿದೆ.
 

ಸದ್ಯಕ್ಕೆ ಈ ಸೇವೆ ಹಿಂದೂಸ್ಥಾನ್ ಪೆಟ್ರೋಲಿಯಂ (ಹೆಚ್‌ಪಿ) ಗ್ಯಾಸ್‌ನ ಗ್ರಾಹಕರು ರಿಲೆಯನ್ಸ್‌ನ ಆರ್ ವರ್ಲ್ಡ್ ಮೂಲಕ ಗ್ಯಾಸ್ ಬುಕ್ಕಿಂಗ್, ದೂರು ದಾಖಲಾತಿ, ಮಾಹಿತಿ ಸಂಗ್ರಹಣೆ ಮುಂತಾದ ಸೇವೆಯನ್ನು ಪಡೆಯಬಹುದಾಗಿದೆ.
 

`ಈ ಸೇವೆಯನ್ನು ಮುಂದಿನ ೩೦ ದಿನಗಳಲ್ಲಿ ಇಂಡಿಯನ್ ಆಯಿಲ್ ಮತ್ತು ಭಾರತ್ ಪೆಟ್ರೋಲಿಯಂ ಗ್ರಾಹಕರಿಗೂ ವಿಸ್ತರಿಸಲಾಗುವುದು' ಎಂದು ಆರ್‌ಸಿಎಲ್‌ನ ನಿರ್ದೇಶಕರಲ್ಲಿ ಒಬ್ಬರಾದ ಮಹೇಶ್ ಪ್ರಸಾದ್ ಹೇಳಿದ್ದಾರೆ.
 

ಈ ಸೇವೆಯಲ್ಲಿ ಗ್ರಾಹಕರಿಗೆ ಪ್ರತ್ಯೇಕ ಬುಕ್ಕಿಂಗ್ ನಂಬರ್ ಕೊಡಲಾಗುತ್ತದೆ. ಅನಿಲ ಸೋರಿಕೆ, ಅಸಮರ್ಪಕ ವಿತರಣೆ ಮತ್ತು ಇನ್ನಿತರ ಯಾಂತ್ರಿಕ ವಿಫಲತೆಯ ಬಗ್ಗೆ ದೂರನ್ನು ನೀಡಬಹುದಾಗಿದೆ.
 

ಆರ್ ವರ್ಲ್ಡ್ ನಿಂದ ರೈಲ್ವೇ ಬುಕ್ಕಿಂಗ್ ಹಾಗೂ ಏರ್‌ಲೈನ್ ಬುಕ್ಕಿಂಗ್, ಸ್ಪೀಡ್ ಪೋಸ್ಟ್ ಸೇವೆ, ಬಿಲ್ ಪಾವತಿ ಮತ್ತು ಮೊಬೈಲ್ ಬ್ಯಾಂಕಿಂಗ್ ಮುಂತಾದ ಸೇವೆಯನ್ನು ನೀಡುತ್ತಿದೆ.

 

ಇನ್ನಷ್ಟು

ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್

ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ

ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ

ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್

ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ

`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ

ನ.೧೬ರಿಂದ ಹೆಲ್ಮೆಟ್ ಕಡ್ಡಾಯ

ರಾಜ್ಯದಲ್ಲಿ ಸುವರ್ಣ ಸಂಭ್ರಮದ ಆಚರಣೆ

ಹೈ-ಕ ಗಡಿಯಲ್ಲಿ ನ.೧ರಂದು ಕಪ್ಪು ದಿನಾಚರಣೆ

ಸನ್ ಟಿವಿ ಯಿಂದ ೩ ಹೊಸ ಎಫ್‌ಎಂ ವಾಹಿನಿ

ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com