|
ಬಿಗ್ ಬಿ ಗೆ ದೆಹಲಿ ವಿವಿಯಿಂದ ಗೌರವ ಡಾಕ್ಟರೇಟ್
ನವದೆಹಲಿ: ಖ್ಯಾತ ನಟ ಅಮಿತಾಬ್ ಬಚ್ಚನ್ ಕೀರ್ತಿ ಕಲಶಕ್ಕೆ
ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ದೆಹಲಿ ವಿಶ್ವವಿದ್ಯಾಲಯದಲ್ಲಿ
ನವೆಂಬರ್ ೪ ರಂದು ನಡೆಯಲಿರುವ ಸಮಾರಂಭದಲ್ಲಿ ಬಚ್ಚನ್
ಅವರಿಗೆ ಡಾಕ್ಟರೇಟ್ ನೀಡುವುದಾಗಿ ದೆಹಲಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್
ಎಕೆ ದುಬೇ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ವಿಜ್ಞಾನಿ ಪ್ರೋ ಸಿಎನ್‌ಆರ್ ರಾವ್, ಜ್ಞಾನಪೀಠ
ವಿಜೇತೆ ಮಹಾಶ್ವೇತ ದೇವಿ, ಇತಿಹಾಸಜ್ಞ ರೋಮೆಲಾ ಥಾಪರ್, ಚಿತ್ರಕಾರ
ಆರ್ ಕೆ ಲಕ್ಷ್ಮಣ್, ರತನ್ ಟಾಟಾ ಮುಂತಾದವರನ್ನು ಸನ್ಮಾನಿಸುವ
ಕಾರ್ಯಕ್ರಮ ಕೂಡ ಇರುತ್ತದೆ.
ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನು ಕಳೆದ
ಜುಲೈನಲ್ಲಿ ಲಿಸ್ಟೇಸ್ಟರ್‌ನ ಡಿ ಮೊನ್ ಫೋರ್ಟ್ ವಿಶ್ವವಿದ್ಯಾಲಯದ
ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗಿತ್ತು.
ಅಮಿತಾಬ್ ಹಾಗೂ ದಿಕ್ಷೀತ್ ದೆಹಲಿ ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿಗಳ
ಸಂಘಕ್ಕೆ ಸೇರಿದವರಾಗಿದ್ದಾರೆ. ಕಳೇದ ಅಕ್ಟೋಬರ್‌ನಲ್ಲಿ ಫ್ರಾನ್ಸ್
ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನು ಅಮಿತಾಬ್
ಪಡೆದಿದ್ದರು.
ಸದ್ಯ ವಿದೇಶಿದಲ್ಲಿರುವ ರತನ್ ಟಾಟಾ ಹಾಗೂ ಪ್ರೋ. ಥಾಪರ್ ಬಿಟ್ಟು
ಉಳಿದವರೆಲ್ಲರೂ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯನ್ನು
ದುಬೆ ಹೇಳಿದರು.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|