|
ಐಟಿ ಕ್ವಿಜ್‌ನಿಂದ ಗಿನ್ನೆಸ್‌ಗೆ ಸೇರಲು ಟಿಸಿಎಸ್ ಉತ್ಸುಕ
ಬೆಂಗಳೂರು: ಭಾರತದ ಖ್ಯಾತ ಸಾಫ್ಟ್ ವೇರ್ ಸಂಸ್ಥೆ ಟಾಟಾ
ಕನ್ಸಲ್ಟೆನ್ಸಿ ಸರ್ವಿಸ್(ಟಿಸಿಎಸ್) ಗಿನ್ನೆಸ್ ದಾಖಲಾತಿಗಾಗಿ ಪ್ರಯತ್ನಿಸುತ್ತಿದೆ.
ಟಿಸಿಎಸ್ ಸಂಸ್ಥೆ ನಡೆಸಿದ `ಐಟಿ ಕ್ವಿಜ್' ಮೇಳದಲ್ಲಿ ಸುಮಾರು ೯.೫೫
ಲಕ್ಷ ಮಂದಿ ವಿದ್ಯಾರ್ಥಿಗಳು ಒಂದೇ ದಿನ ಭಾಗವಹಿಸಿದ್ದು
ದಾಖಲೆಯಾಗುವ ಸಾಧ್ಯತೆಯಿದೆ.
ಟಿಸಿಎಸ್ ಸಂಸ್ಥೆಯು ಐಟಿ ಕ್ವಿಜ್‌ನ ಪೂರ್ವ ಸಿದ್ಧತಾ ಪರೀಕ್ಷೆಗಾಗಿ
ಸುಮಾರು ೧೦.೮ ಲಕ್ಷ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿತ್ತು.
ನಂತರ ಪ್ರಶ್ನೆಪತ್ರಿಕೆಗಳನ್ನು ಪ್ರಾಂತೀಯ ಶಿಕ್ಷಣ ಅಧಿಕಾರಿಗಳಿಗೆ
ಕಳಿಸಲಾಯಿತು. ಸೆಪ್ಟೆಂಬರ್ ೧೫ರಂದು ನಡೆದ ಪರೀಕ್ಷೆಯಲ್ಲಿ ಏಕ
ಕಾಲಕ್ಕೆ ಸುಮಾರು ೯.೫೫ ಲಕ್ಷ ಜನ ವಿದ್ಯಾರ್ಥಿಗಳು ಹಾಜರಾಗಿದ್ದು
ದಾಖಲೆ.
ಅರಮನೆ ಮೈದಾನದಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಹಾಸನದ ಸಂತ
ಜೋಸೆಫ್ ಪದವಿ ಪೂರ್ವ ಕಾಲೇಜಿನ ಬಿ.ಎಸ್. ಕಾರ್ತಿಕ್ ಮತ್ತು ಜಿ.
ಅರ್ಜುನ್ ಕುಮಾರ್ ಪ್ರಥಮ ಸ್ಥಾನ ಗಳಿಸಿದರು. ಇವರಿಗೆ ೮೦,೦೦೦
ಲಭಿಸಿತು.
ಉಡುಪಿಯ ಲಿಟಲ್ ರಾಕ್ಸ್ ಶಾಲೆಯ ಪವನಕುಮಾರ್ ಹೊಳ್ಳ ಮತ್ತು
ಕಾರ್ತಿಕ್ ಹೆಬ್ಬಾರ್
ದ್ವಿತೀಯ ಸ್ಥಾನ ಗಳಿಸಿದರು. ೫೦,೦೦೦ ರೂ ಇವರ ಪಾಲಾಯಿತು.
ಮೊದಲ ಬಾರಿಗೆ ೨೦೦೦ರಲ್ಲಿ ನಡೆಸಿದ ಐಟಿ ಕ್ವಿಜ್ ನ ಪ್ರಥಮ ಸುತ್ತಿನ
ಪರೀಕ್ಷೆಗೆ ಸುಮಾರು ೨೮,೦೦೦ ವಿದ್ಯಾರ್ಥಿಗಳು ಹಾಜರಾಗಿದ್ದು ಲಿಮ್ಕಾ
ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆಯಾಗಿ ಉಳಿದಿದೆ.
ಇನ್ನಷ್ಟು
ಭಾರತದಲ್ಲಿ ೩೭ ದಶಲಕ್ಷ ದೃಷ್ಟಿ ಹೀನರು!!
ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್
ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
ಆಸೀಸ್ ದಾಳಿಗೆ ಇಂಡಿಯಾ ಬಲಿ
ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|