|
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ನವದೆಹಲಿ: ಗುರುವಾರ ಕೇಂದ್ರ ಸರ್ಕಾರ ಮಹಿಳೆಯರಿಗೆ
ಇನ್ನೂ ಹೆಚ್ಚಿನ ರಕ್ಷಣೆ ಒದಗಿಸಲು `ಕೌಟುಂಬಿಕ ದೌರ್ಜನ್ಯ ತಡೆ
ಕಾಯಿದೆ'ಯನ್ನು ಜಾರಿ ತಂದಿದೆ. ಈ ಹಿನ್ನೆಲೆಯಲ್ಲಿ `ಭಾರತೀಯ
ಕುಟುಂಬ ಉಳಿಸಿ' ಎಂಬ ಸಂಘಟನೆಯೊಂದು ಈ ಕಾಯಿದೆಯ ವಿರುದ್ಧ
ಹೋರಾಟವನ್ನೇ ಪ್ರಾರಂಭಿಸಿದೆ.
`ವರದಕ್ಷಿಣೆ ವಿರೋಧಿ ಕಾಯಿದೆ ಮಹಿಳೆಯರಿಗೆ ಸಮಾಧಾನ
ತಂದಂತಿಲ್ಲ. ಇದೀಗ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯನ್ನು ಜಾರಿ
ತರುವ ಮೂಲಕ ಮಹಿಳೆಯರು ಪವಿತ್ರವಾದ ವಿವಾಹ ಬಂಧನವನ್ನು
ಶಿಲುಬೆಗೆ ಏರಿಸಿದ್ದಾರೆ. ಕಾನೂನು ಪ್ರಕಾರವಾಗಿಯೇ ಗಂಡ ಮತ್ತು
ಅವನ ಕುಟುಂಬವನ್ನು ಲೂಟಿ ಮಾಡುವುದು ಅವರ ಉದ್ದೇಶ' ಎಂದು
ಅಭಿಪ್ರಾಯ ಪಡುತ್ತಾರೆ `ಭಾರತೀಯ ಕುಟುಂಬ ಉಳಿಸಿ' ಸಂಘಟನೆಯ
ಸದಸ್ಯ ಸ್ವರೂಪ್ ಸರ್ಕಾರ್.
`ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ'ಯನ್ನು ಪುರುಷರು ತೀವ್ರವಾಗಿ
ವಿರೋಧಿಸುತ್ತಾರೆ ಎಂದು ಸಂಘಟನೆ ಹೇಳಿಕೊಳ್ಳುತ್ತಿದೆ.
ಈಗಾಗಲೇ ಪ್ರಧಾನಿ, ರಾಷ್ಟ್ರಪತಿ, ಸಂಸತ್ ಸದಸ್ಯರಿಗೆ `ಈ ಕಾಯಿದೆ
ಮದುವೆಯನ್ನು ಶಿಲುಬೆಗೇರಿಸುತ್ತದೆ' ಎನ್ನುವ ಸಂದೇಶವನ್ನು
`ಭಾರತೀಯ ಕುಟುಂಬ ಉಳಿಸಿ' ಎಂಬ ಸಂಘಟನೆ ರವಾನಿಸಿದೆ.
ಇನ್ನಷ್ಟು
ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|