|
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
ಬೆಂಗಳೂರು: ಗುರುವಾರ ಮಧ್ಯರಾತ್ರಿ ಪೊಲೀಸರು
ಮೈಸೂರಿನಲ್ಲಿ ಬಂಧಿಸಿದ ಇಬ್ಬರು ಉಗ್ರರ ಮೂಲಕ ಅವರ
ಭಯಾನಕ ಸಂಚುಗಳನ್ನು ಬಯಲು ಮಾಡಿದ್ದಾರೆ.
ಪೊಲೀಸರು ಹೊರಗೆಡವಿದ ವಿಷಯಗಳು ಇಂತಿವೆ:
ಬಂಧಿತ
ಉಗ್ರರು ಕರಾಚಿಯ ಫಹಾದ್(೨೪) ಮತ್ತು ಮುನ್ಷೇರಾದ
ಮಹಮ್ಮದ್ ಅಲಿ ಹುಸೇನ್(೨೪) ಆಗಿದ್ದಾರೆ.
ಇಬ್ಬರೂ
ನಿಷೇಧಿತ `ಅಲ್ ಬದ್ರ್' ಉಗ್ರಗಾಮಿ ಸಂಘಟನೆಯವರು.
ಈ
ಉಗ್ರರಿಂದ ವಿಕಾಸ ಸೌಧ, ವಿಧಾನ ಸೌಧಗಳ ನಕ್ಷೆ, ಒಂದು ಏಕೆ-೪೭
ಬಂದೂಕು ಮತ್ತು ಅಫ್ಘನ್ ನಿರ್ಮಿತ ಪಿಸ್ತೂಲ್, ಲ್ಯಾಪ್‌ಟಾಪ್ ಹಾಗೂ
ಸಿಡಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಳ್ಳಲಾದ
ಲ್ಯಾಪ್‌ಟಾಪ್‌ನ ಮೂಲಕ ಉಗ್ರರ ಸಂಪರ್ಕ, ಹಣಕಾಸಿನ ವ್ಯವಹಾರ
ಅವರ ಕಾರ್ಯಾಚರಣೆಗಳ ಬಗ್ಗೆ ಮಹತ್ವ ಮಾಹಿತಿಗಳು
ಲಭ್ಯವಾಗಿವೆ. ಸಿಡಿಗಳಲ್ಲಿ ಬಾಂಬ್ ತಯಾರಿಕೆಯ ವಿವರಗಳಿವೆ.
ಮೊಬೈಲ್
ಫೋನ್‌ನಿಂದ ಕಾಶ್ಮೀರ ಹಾಗೂ ಪಾಕಿಸ್ತಾನಕ್ಕೆ ಕರೆ ಮಾಡಿದ
ದಾಖಲೆಗಳು ಸಿಕ್ಕಿವೆ.
ಬಂಧಿತರು
ವಾಸವಿದ್ದ ಮನೆಯಲ್ಲಿ `ಅಲ್ ಬದ್ರ್' ಸಂಘಟನೆಯ ಲೆಟರ್‌ಹೆಡ್
ದೊರಕಿವೆ.
ಈ
ಉಗ್ರರು ೧೨ ಲಕ್ಷ ರೂ.ಗಳನ್ನು ಜಮ್ಮು ಕಾಶ್ಮೀರದ ಉಗ್ರರಿಗೆ
ನೀಡಿದ್ದಾರೆ.
ರಾಜ್ಯದಲ್ಲಿ ಅಡಗಿರಬಹುದಾದ ಇನ್ನಿತರ ಉಗ್ರರನ್ನು ಬಂಧಿಸಲು
`ಇಂಟೆಲಿಜೆನ್ಸ್ ಬ್ಯೂರೊ(ಐಬಿ), ಮತ್ತು ಸೆಂಟ್ರಲ್ ಇಂಟೆಲಿಜೆನ್ಸ್ ಎಜೆನ್ಸಿ
(ಸಿಐಎ)ದ ಸಹಾಯ ಪಡೆಯಲಾಗುವುದು ಎಂದು ಶುಕ್ರವಾರ
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪೊಲೀಸ್
ಮಹಾನಿರ್ದೇಶಕ ಬಿ. ಎಸ್. ಸಿಯಾಲ್ ತಿಳಿಸಿದ್ದಾರೆ.
ಇನ್ನಷ್ಟು
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
`ಬರಹ' ಸೃಷ್ಟಿಕರ್ತ ವಾಸುರವರಿಗೆ ಸನ್ಮಾನ
ಮೈಸೂರಿನಲ್ಲಿ ಮಧ್ಯರಾತ್ರಿ ಪಾಕ್ ಉಗ್ರರ ಸೆರೆ
ಧರ್ಮಸ್ಥಳ ಟ್ರಸ್ಟ್‌ನಿಂದ ಹೊಸ ನರ್ಸಿಂಗ್
ಕಾಲೇಜ್
ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಸಿದ್ಧು ದೂರು
ಮುಂದಿನ ಏಪ್ರಿಲ್‌ನಲ್ಲಿ ವಿಶ್ವ ಗೋವು ಸಮ್ಮೇಳನ
ಮಹಿಳೆಯರಿಗೆ ಮತ್ತಷ್ಟು ಕಾನೂನು ಬಲ
ಇನ್ನು ಮುಂದೆ ಒಂದೇ ಸಾಮಾನ್ಯ ಪರೀಕ್ಷೆ
ಸಿಎಂ ಮಗನನ್ನು ತದಕಿದ ಹೋಟೆಲ್ ಸಿಬ್ಬಂದಿ
ಎನ್ರಾನ್ ಸಂಸ್ಥೆ ಮಾಜಿ ಸಿಇಓಗೆ ೨೪ ವರ್ಷ ಜೈಲು
ಬ್ರಹ್ಮಪುತ್ರಕ್ಕೆ ಚೈನಾ
ಅಣೆಕಟ್ಟು: ಭಾರತಕ್ಕೆ ತಲೆನೋವು
|