Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 27 October 2006 05:42 PM

ರಂಗಾಯಣದಲ್ಲಿ ಅಕ್ಟೋಬರ್ ೨೮ ರಿಂದ `ನಾಡಸಿರಿ' ಶುರು

 

ಮೈಸೂರು: ಕರ್ನಾಟಕದ ಜಾನಪದ ಕಲೆಯನ್ನು ಎಲ್ಲರಿಗೂ ಪರಿಚಯಿಸುವ ನಿಟ್ಟಿನಲ್ಲಿ ರಂಗಾಯಣವು `ನಾಡಸಿರಿ' ಎಂಬ ಜಾನಪದ ಆಧಾರಿತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
 

`ಈ ತಿಂಗಳ ೨೮ ರಿಂದ ಆರಂಭಗೊಳ್ಳುವ ಒಂದು ವರ್ಷ ಅವಧಿಯ ಈ ಕಾರ್ಯಕ್ರಮಕ್ಕೆ ನಾಡಿನ ಮೂಲೆ ಮೂಲೆಗಳಿಂದ ಜಾನಪದ ಕಲಾವಿದರ ಆಗಮನದ ನಿರೀಕ್ಷೆಯಿದೆ' ಎಂದು ರಂಗಾಯಣದ ನಿರ್ದೇಶಕ ಚಿದಂಬರ ಜಂಬೆ ಹೇಳಿದ್ದಾರೆ. ಪ್ರತಿ ಶನಿವಾರ ಸಂಜೆ ೫ ಗಂಟೆಗೆ ಜಾನಪದ ಕಲೆಯ ಪ್ರದರ್ಶನವನ್ನು ಕಲಾವಿದರು ನೀಡಲಿದ್ದಾರೆ.
 

`ಪ್ರತಿ ವರ್ಷ ನಡೆಯುವ `ನಾಡಸಿರಿ' ಕಾರ್ಯಕ್ರಮದ ಮೂಲ ಉದ್ದೇಶ ನಾಡಿನ ಕಲೆ ಮತ್ತು ಸಂಸ್ಕೃತಿಯ ಪರಿಚಯವನ್ನು ಪ್ರವಾಸಿಗರಿಗೆ ನೀಡುವುದು ಹಾಗೂ ಕಲೆಯ ಸರಂಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದೇ ಅಗಿದೆ' ಎಂದು ನಿರ್ದೇಶಕ ಜಂಬೆ ಸುದ್ದಿಗಾರರಿಗೆ ಹೇಳಿದರು.
 

೨೦೦೪ ರಲ್ಲಿ ನಡೆದ `ನಾಡಸಿರಿ' ಕಾರ್ಯಕ್ರಮದಲ್ಲಿ ಸುಮಾರು ೬೯ ತಂಡದ ೭೦೩ ಜಾನಪದ ಕಲಾವಿದರು ಪ್ರದರ್ಶನ ನೀಡಿದ್ದರು.
 

ರಂಗಾಯಣದ ವನರಂಗ ಬಯಲು ರಂಗಮಂದಿರದಲ್ಲಿ ನಡೆಯುವ `ನಾಡಸಿರಿ' ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯ ಸಹಯೋಗ ಕೂಡ ದೊರೆತಿದೆ.
 

ಕಂಸಾಳೆ, ವೀರಗಾಸೆ, ಜಗ್ಗಲಿಗೆ, ಪೂಜಾ ಕುಣಿತ, ಪಟ ಕುಣಿತ, ಹಲಗೆ ವಾದನ ಮುಂತಾದ ನಾನಾ ಪ್ರಕಾರದ ಕುಣಿತಗಳ ಪ್ರದರ್ಶನವನ್ನು ಕಾಣಬಹುದಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಟಿ. ಜಯಕುಮಾರ್ ಮಾಡಲಿದ್ದಾರೆ.

 

ಇನ್ನಷ್ಟು

ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ

ಒಂದೇ ಹೆಸರಲ್ಲಿ ಬೇಕಾದಷ್ಟು ಸಿಮ್

ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ

ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ

ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ

`ಬರಹ' ಸೃಷ್ಟಿಕರ್ತ ವಾಸುರವರಿಗೆ ಸನ್ಮಾನ

ಮೈಸೂರಿನಲ್ಲಿ ಮಧ್ಯರಾತ್ರಿ ಪಾಕ್ ಉಗ್ರರ ಸೆರೆ

ಧರ್ಮಸ್ಥಳ ಟ್ರಸ್ಟ್‌ನಿಂದ ಹೊಸ ನರ್ಸಿಂಗ್ ಕಾಲೇಜ್

ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಸಿದ್ಧು ದೂರು

ಮುಂದಿನ ಏಪ್ರಿಲ್‌ನಲ್ಲಿ ವಿಶ್ವ ಗೋವು ಸಮ್ಮೇಳನ

ಮಹಿಳೆಯರಿಗೆ ಮತ್ತಷ್ಟು ಕಾನೂನು ಬಲ

ಇನ್ನು ಮುಂದೆ ಒಂದೇ ಸಾಮಾನ್ಯ ಪರೀಕ್ಷೆ

ಸಿಎಂ ಮಗನನ್ನು ತದಕಿದ ಹೋಟೆಲ್ ಸಿಬ್ಬಂದಿ

ಎನ್ರಾನ್ ಸಂಸ್ಥೆ ಮಾಜಿ ಸಿಇಓಗೆ ೨೪ ವರ್ಷ ಜೈಲು

ಬ್ರಹ್ಮಪುತ್ರಕ್ಕೆ ಚೈನಾ ಅಣೆಕಟ್ಟು: ಭಾರತಕ್ಕೆ ತಲೆನೋವು

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com