|
ಗುಂಡು ಹಾಕಲೂ ಬೇಕು ಲೈಸನ್ಸ್
ಬೆಂಗಳೂರು: ವಾರದ ಕೊನೆಯಲ್ಲಿ ಪಬ್‌ನಲ್ಲಿ ಅಥವಾ ಲಾಂಜ್
ಬಾರ್‌ನಲ್ಲಿ ಕುಳಿತು ಆರಾಮವಾಗಿ ಮದ್ಯದ ರುಚಿ ನೋಡಲು
ಯೋಜಿಸಿದ್ದರೆ, ಸ್ವಲ್ಪ ತಡಿರಿ. ನಿಮ್ಮ ವಯಸ್ಸಿನ ಪ್ರಮಾಣ
ಪತ್ರವನ್ನು ಜೊತೆಗೆ ಒಯ್ಯಬೇಕಾಗುತ್ತದೆ.
ಇತ್ತೀಚಿಗೆ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆಡಂ
ನೈಟ್ ಕ್ಲಬ್‌ನಲ್ಲಿ ಪೊಲೀಸರ ಮೇಲೆ ನಡೆಸಿದ ದಾಂಧಲೆಯ
ಪರಿಣಾಮದಿಂದ ಪಾಠ ಕಲಿತಿರುವ ನಮ್ಮ ಪೊಲೀಸರು ಈ ನಿರ್ಣಯ
ಕೈಗೊಂಡಿದ್ದಾರೆ.
ಅಪ್ರಾಪ್ತ ವಯಸ್ಕರು ನೈಟ್ ಕ್ಲಬ್ ಹಾಗೂ ಪಬ್‌ಗಳಿಗೆ
ಹೋಗುವುದನ್ನು ತಡೆಗಟ್ಟಲು ಬೆಂಗಳೂರು ಪೊಲೀಸರು ಇನ್ನು
ಮುಂದೆ ಹೊಸ ರೀತಿಯ ಜಾಲವನ್ನು ಹೂಡಲಿದ್ದಾರೆ.
ಸಾದಾ ದಿರಿಸನ್ನು(ಮಫ್ತಿ) ಧರಿಸಿ ವಿಡಿಯೊ ಕೆಮೆರಾ ಹಿಡಿದು ಪಬ್
ಒಳಬರುವ ಯುವಕ/ತಿಯರನ್ನು ತಡೆಗಟ್ಟಿ ವಯಸ್ಸಿನ ಪ್ರಮಾಣ
ಪತ್ರಕ್ಕಾಗಿ ವಿಚಾರಿಸಲಿದ್ದಾರೆ.
ಆದರೆ ಅಪ್ರಾಪ್ತ ವಯಸ್ಕರು ಗುಂಡು ಹಾಕುತ್ತಿರುವುದು
ಕಂಡುಬಂದರೆ ಮೊದಲು ಗುಂಡು ನೀಡಿದ ಪಬ್ ಮಾಲೀಕನ ಮೇಲೆ
ಕ್ರಮ ಜರುಗಿಸುವುದಾಗಿ ಪೊಲೀಸರು ಹೇಳಿದ್ದಾರೆ.
ಪಬ್ ಮಾಲೀಕರಿಗೆ ಸುಮಾರು ೫,೦೦೦ ರಿಂದ ೨೫,೦೦೦ ರೂ ದಂಡ
ವಿಧಿಸಲಾಗುವುದು ಎಂದು ಉಪ ಆಯುಕ್ತ (ಕೇಂದ್ರ) ಜಿ. ಬಿ. ಛೆಬ್ಬಿ
ಹೇಳಿದ್ದಾರೆ.
ವಯಸ್ಸಿನ ವಿಷಯದಲ್ಲಿ ಅನುಮಾನವಿದ್ದಲ್ಲಿ ರೇಡಿಯೊಲಾಜಿಷ್ಟ್(ವಿಕಿರಣ
ಶಾಸ್ತ್ರಜ್ಞ) ಬಳಿಗೆ ಕರೆದೊಯ್ದು ಪರೀಕ್ಷಿಸಲಾಗುವುದು ಎಂದು ಛೆಬ್ಬಿ
ಹೇಳಿದ್ದಾರೆ.
ಇನ್ನಷ್ಟು
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
`ಬರಹ' ಸೃಷ್ಟಿಕರ್ತ ವಾಸುರವರಿಗೆ ಸನ್ಮಾನ
ಮೈಸೂರಿನಲ್ಲಿ ಮಧ್ಯರಾತ್ರಿ ಪಾಕ್ ಉಗ್ರರ ಸೆರೆ
ಧರ್ಮಸ್ಥಳ ಟ್ರಸ್ಟ್‌ನಿಂದ ಹೊಸ ನರ್ಸಿಂಗ್
ಕಾಲೇಜ್
ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಸಿದ್ಧು ದೂರು
ಮುಂದಿನ ಏಪ್ರಿಲ್‌ನಲ್ಲಿ ವಿಶ್ವ ಗೋವು ಸಮ್ಮೇಳನ
ಮಹಿಳೆಯರಿಗೆ ಮತ್ತಷ್ಟು ಕಾನೂನು ಬಲ
ಇನ್ನು ಮುಂದೆ ಒಂದೇ ಸಾಮಾನ್ಯ ಪರೀಕ್ಷೆ
ಸಿಎಂ ಮಗನನ್ನು ತದಕಿದ ಹೋಟೆಲ್ ಸಿಬ್ಬಂದಿ
ಎನ್ರಾನ್ ಸಂಸ್ಥೆ ಮಾಜಿ ಸಿಇಓಗೆ ೨೪ ವರ್ಷ ಜೈಲು
ಬ್ರಹ್ಮಪುತ್ರಕ್ಕೆ ಚೈನಾ
ಅಣೆಕಟ್ಟು: ಭಾರತಕ್ಕೆ ತಲೆನೋವು
|