|
ಎನ್ರಾನ್ ಸಂಸ್ಥೆ ಮಾಜಿ ಸಿಇಓಗೆ ೨೪ ವರ್ಷ ಜೈಲು
ವಾಷಿಂಗ್ಟನ್: ಎನ್ರಾನ್ ಸಂಸ್ಥೆಯ ಮಾಜಿ ಮುಖ್ಯ ಕಾರ್ಯ
ನಿರ್ವಾಹಣಾಧಿಕಾರಿ ಜೆಫ್ರಿ ಕೆ ಸ್ಕೆಲ್ಲಿಂಗ್‌ಗೆ ೨೪ ವರ್ಷ ಹಾಗೂ ೪ ತಿಂಗಳ
ಸೆರೆಮನೆ ವಾಸವನ್ನು ಅಮೇರಿಕಾ ಸರ್ಕಾರ ನೀಡಿದೆ.
೫೨ ವರ್ಷದ ಸ್ಕೆಲ್ಲಿಂಗ್‌ಗೆ ಇದು ಜೀವಾವಧಿ ಶಿಕ್ಷೆಯಾದಂತಾಗಿದೆ.
ಎನ್ರಾನ್ ಸಂಸ್ಥೆಯು ದಿವಾಳಿಯಾಗಲು ಒಳಸಂಚು ನಡೆಸಿದ
ಆರೋಪವನ್ನು ಸ್ಕೆಲ್ಲಿಂಗ್ ಅವರ ಮೇಲೆ ಹೊರೆಸಲಾಗಿದೆ. ಸ್ಕೆಲ್ಲಿಂಗ್
ಅವರಿಗೆ ನೀಡಿದ ದೀರ್ಘಾವಧಿ ಶಿಕ್ಷೆ ಸ್ವಲ್ಪದರಲ್ಲೇ ದಾಖಲೆ
ನಿರ್ಮಿಸುವುದರಲ್ಲಿ ವಿಫಲವಾಗಿದೆ.
ವರ್ಲ್ಡ್ ಕಾಂನ ಸಿಇಓ ಬೆರ್ನಾಡ್ ಜೆ ಎಬ್ಬರ್ಸ್ ಅವರು ನಡೆಸಿದ ೧೧
ಬಿಲಿಯನ್ ಡಾಲರ್ ಅವ್ಯವಹಾರ ಹಾಗೂ ಕಂಪೆನಿಯ ಅವನತಿಗೊಳಿಸಲು
ನಡೆಸಿದ ಸಂಚಿಗಾಗಿ ಅವರಿಗೆ ೨೫ ವರ್ಷಗಳ ಶಿಕ್ಷೆ ನೀಡಲಾಗಿತ್ತು.
ಎನ್ರಾನ್ ವಿದ್ಯುತ್ ಸಂಸ್ಥೆಯ ಸಹಸ್ಥಾಪಕ ಕೆನ್ನೆತ್ ಲೇ ಕೂಡ
ಕಂಪೆನಿ ಮುಳುಗಿಸಿದ ಆರೋಪ ಹೊತ್ತಿದ್ದರು. ಆದರೆ ಕಳೆದ
ಜುಲೈನಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದರು.
ಇನ್ನಷ್ಟು
ಬ್ರಹ್ಮಪುತ್ರಕ್ಕೆ ಚೈನಾ
ಅಣೆಕಟ್ಟು: ಭಾರತಕ್ಕೆ ತಲೆನೋವು
ಆಪೆಲ್ ಮ್ಯೂಸಿಕ್ ಡೌನ್‌ಲೋಡರ್ ಹ್ಯಾಕರ್‌ನಿಂದ ಬ್ರೇಕ್
ರಿಲೆಯನ್ಸ್ ರಿಫೈನರಿಯಲ್ಲಿ ಬೆಂಕಿ ಆಕಸ್ಮಿಕ
ಬೆಂಗಳೂರಿನಲ್ಲಿ ಸದ್ಯದಲ್ಲೇ ಜೀವ ವೈವಿಧ್ಯ ಪಾರ್ಕ್
ತಮಿಳು ಪೊಲೀಸರಿಗೆ ಹುಂಡೈ ಸಂಸ್ಥೆಯ ಕಾರು
ನವೆಂಬರ್ ೨ರಂದು ಎಸ್‌ಜೆಪಿ ರಸ್ತೆ ವಾಹನಗಳಿಗೆ ಮುಕ್ತ
ಪ್ರಸಿದ್ಧ ವೈದ್ಯ ನಾಗಲೋಟಿಮಠ ನಿಧನ
ಕರ್ನಾಟಕಕ್ಕೆ ೨೮ನೇ ಜಿಲ್ಲೆ ಸೇಪರ್ಡೆಯ ಸಾಧ್ಯತೆ
ಕೇಂದ್ರ ಸಂಪುಟದಲ್ಲಿ ಅಂಬಿಗೆ ಸ್ಥಾನ
ನೈಸರ್ಗಿಕ ಅನಿಲ ಕಂಪೆನಿಗಳಿಗೆ ನೂತನ ನೀತಿ
ಗೋಧಿ ಆಮದಿನಲ್ಲಿ ಭಾರತ ಎಲ್ಲರಿಗಿಂತ ಮುಂದೆ
ಗುಟ್ಕಾ ನಿಷೇಧ: ಅಡಿಕೆ ಬೆಳೆಗಾರರಲ್ಲಿ ಭೀತಿ
ಪೊಲೀಸರ ಮೈಮೇಲೇ ಬಿದ್ದ ಬಿದ್ದಪ್ಪನ ಪುತ್ರ
ನಮಗಾಗಿ ಒಂದು ದಿನ ಮೀಸಲಿಡಿ: ರೈತರ ಒತ್ತಾಯ
|