|
ಬ್ರಹ್ಮಪುತ್ರಕ್ಕೆ ಚೈನಾ ಅಣೆಕಟ್ಟು: ಭಾರತಕ್ಕೆ ಹೊಸ ತಲೆನೋವು
ಗೌಹಾತಿ: ಪೂರ್ವ ಭಾರತಕ್ಕೆ ನೀರು ಪೂರೈಸುವ ಪ್ರಮುಖ
ನದಿ ಬ್ರಹ್ಮಪುತ್ರಕ್ಕೆ ಅಣೆಕಟ್ಟು ಕಟ್ಟಲು ಚೈನಾ ನಿರ್ಧರಿಸಿದೆ. ಚೈನಾದ
ಈ ನಿರ್ಧಾರ ಭಾರತದ ಪರಿಸರದ ಮೇಲೆ ದುಷ್ಟರಿಣಾಮ
ಬೀರಬಹುದೆನ್ನುವ ಭೀತಿ ಭಾರತಕ್ಕೆ ಮೂಡಿದೆ.
`ಚೈನಾದ ನಿರ್ಧಾರ ನಮ್ಮ ಮೇಲೆ ಯಾವ ರೀತಿಯ ಪರಿಣಾಮ
ಬೀರಬಹುದು ಎನ್ನುವುದನ್ನು ಅಧ್ಯಯನ ಮಾಡಲು ತಜ್ಞರ ಒಂದು
ಸಮಿತಿಯನ್ನು ರಚಿಸಲು ಈಗಾಗಲೇ ನಿರ್ಧರಿಸಲಾಗಿದೆ' ಎಂದು ಅಸ್ಸಾಂನ
ಮುಖ್ಯಮಂತ್ರಿ ತುರುಣ್ ಗೊಗೊಯ್ ಹೇಳಿದ್ದಾರೆ.
ಅರುಣಾಚಲ ಪ್ರದೇಶ ಸರ್ಕಾರವು ಪ್ರಧಾನ ಮಂತ್ರಿ ಮನಮೋಹನ
ಸಿಂಗ್ ಅವರನ್ನು ಈ ಸಮಸ್ಯೆಯನ್ನು ಪರಿಹರಿಸಲು ಕೇಳಿಕೊಂಡಿದೆ.
ಚೈನಾದ ವಿದೇಶಾಂಗ ವಕ್ತಾರ ಲೀ ಜಿಯಾಂಛೋ ಚೈನಾದಲ್ಲಿ
ಹರಿಯುತ್ತಿರುವ ಬ್ರಹ್ಮಪುತ್ರ ನದಿಯ ಪಾತ್ರವನ್ನು ಬದಲಿಸುವ
ಯಾವುದೇ ಯೋಜನೆ ಚೈನಾ ಸರ್ಕಾರದ ಮುಂದಿಲ್ಲ ಎಂದು
ಹೇಳಿದ್ದಾರೆ.
ಸೋಮವಾರ `ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯು ಬ್ರಹ್ಮಪುತ್ರ
ನದಿಯ ೨೦೦ ಬಿಲಿಯನ್ ಕ್ಯೂಬಿಕ್ ನೀರನ್ನು ಚೈನಾದ `ಯಲ್ಲೋ
ರಿವರ್' ಗೆ ತಿರುಗಿಸಲಿದೆ ಎಂದು ವರದಿ ಮಾಡಿತ್ತು.
ಇನ್ನಷ್ಟು
ಆಪೆಲ್ ಮ್ಯೂಸಿಕ್ ಡೌನ್‌ಲೋಡರ್ ಹ್ಯಾಕರ್‌ನಿಂದ ಬ್ರೇಕ್
ರಿಲೆಯನ್ಸ್ ರಿಫೈನರಿಯಲ್ಲಿ ಬೆಂಕಿ ಆಕಸ್ಮಿಕ
ಬೆಂಗಳೂರಿನಲ್ಲಿ ಸದ್ಯದಲ್ಲೇ ಜೀವ ವೈವಿಧ್ಯ ಪಾರ್ಕ್
ದಕ್ಷಿಣ ಆಫ್ರಿಕಾಕ್ಕೆ ಸುಲಭ ತುತ್ತಾದ ಶ್ರೀಲಂಕಾ
ತಮಿಳು ಪೊಲೀಸರಿಗೆ ಹುಂಡೈ ಸಂಸ್ಥೆಯ ಕಾರು
ನವೆಂಬರ್ ೨ರಂದು ಎಸ್‌ಜೆಪಿ ರಸ್ತೆ ವಾಹನಗಳಿಗೆ ಮುಕ್ತ
ಪ್ರಸಿದ್ಧ ವೈದ್ಯ ನಾಗಲೋಟಿಮಠ ನಿಧನ
ಕರ್ನಾಟಕಕ್ಕೆ ೨೮ನೇ ಜಿಲ್ಲೆ ಸೇಪರ್ಡೆಯ ಸಾಧ್ಯತೆ
ಕೇಂದ್ರ ಸಂಪುಟದಲ್ಲಿ ಅಂಬಿಗೆ ಸ್ಥಾನ
ನೈಸರ್ಗಿಕ ಅನಿಲ ಕಂಪೆನಿಗಳಿಗೆ ನೂತನ ನೀತಿ
ಗೋಧಿ ಆಮದಿನಲ್ಲಿ ಭಾರತ ಎಲ್ಲರಿಗಿಂತ ಮುಂದೆ
ಗುಟ್ಕಾ ನಿಷೇಧ: ಅಡಿಕೆ ಬೆಳೆಗಾರರಲ್ಲಿ ಭೀತಿ
ಪೊಲೀಸರ ಮೈಮೇಲೇ ಬಿದ್ದ ಬಿದ್ದಪ್ಪನ ಪುತ್ರ
ನಮಗಾಗಿ ಒಂದು ದಿನ ಮೀಸಲಿಡಿ: ರೈತರ ಒತ್ತಾಯ
|