|
ನವೆಂಬರ್ ೨ರಂದು ಎಸ್‌ಜೆಪಿ ರಸ್ತೆ ವಾಹನಗಳಿಗೆ ಮುಕ್ತ
ಬೆಂಗಳೂರು: ಸಿಲ್ವರ್ ಜ್ಯೂಬಿಲಿ ಪಾರ್ಕ್ ರಸ್ತೆಯ ಕಾಮಗಾರಿ
ಮುಗಿಯುತ್ತಾ ಬಂದಿದ್ದು ನವೆಂಬರ್ ೨ರಂದು ಸಂಚಾರಕ್ಕೆ
ತೆರವಾಗಲಿದೆ.
ಸುಮಾರು ೩.೫ ಕೋಟಿ ವೆಚ್ಚದಲ್ಲಿ ರಸ್ತೆಯ ಡಾಂಬರೀಕರಣ ಹಾಗೂ
ಕಾಂಕ್ರೀಟ್ ಹಾಕುವ ಕಾರ್ಯ ನಡೆದಿದೆ. ಕರ್ನಾಟಕ ಭೂ ಸೇನಾ ನಿಗಮ
ಕಾರ್ಮಿಕರು ಸುಮಾರು ಒಂದು ವರ್ಷದಿಂದ ರಸ್ತೆಗೆ ಒಂದು ರೂಪ
ನೀಡಲು ಹೆಣಗುತ್ತಿದ್ದರು.
`ನಗರದಲ್ಲಿನ ಅತ್ಯಂತ ಕೆಟ್ಟ ರಸ್ತೆಗಳಲ್ಲಿ ಒಂದೆನಿಸಿದ್ದ ಎಸ್‌ಜೆಪಿ
ರಸ್ತೆ ಈಗ ಹೊಸ ರೂಪ ಹೊಂದಲಿದೆ. ಒಳ ಚರಂಡಿ ವ್ಯವಸ್ಥೆ,
ಪಾದಚಾರಿಗಳ ಸಂಚಾರಕ್ಕೆ ವ್ಯವಸ್ಥೆಗಳನ್ನು ಸಮರ್ಪಕವಾಗಿ
ಮಾಡಲಾಗಿದೆ' ಎಂದು ರಸ್ತೆ ನವೀಕರಣದ ಉಸ್ತುವಾರಿ ಹೊತ್ತಿರುವ
ರಂಗನಾಥ್ ಹೇಳಿದ್ದಾರೆ.
ಆದರೆ `ರಸ್ತೆ ನವೀಕರಣ ಕೆಲಸದಿಂದ ಗಿರಾಕಿಗಳು ಬರುವುದು
ಕಮ್ಮಿಯಾಗಿ ನಮಗೆ ತುಂಬಾ ನಷ್ಟ ಆಗಿದೆ' ಎಂದು ವರ್ತಕರ
ಸಂಘದ ಮುಖಂಡ ಬಿ.ಕೆ. ಗೋಯಲ್ ದೂರಿದ್ದಾರೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|