|
ಕೇಂದ್ರ ಸಂಪುಟದಲ್ಲಿ ಅಂಬಿಗೆ ಸ್ಥಾನ
ನವದೆಹಲಿ: ಮಂಗಳವಾರ ಸಂಜೆ ಚಿತ್ರನಟ ಮತ್ತು
ಸಂಸದರಾಗಿರುವ ಅಂಬರೀಷ್ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ
ಖಾತೆಯ ಸಹಾಯಕ ಸಚಿವರಾಗಿ ರಾಷ್ಟ್ರಪತಿ ಭವನದಲ್ಲಿ ನಡೆದ
ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಆಸ್ಕರ್ ಫರ್ನಾಂಡೀಸ್ ಇಷ್ಟು ದಿನ ಖಾತೆ ರಹಿತ ಸಚಿವರಾಗಿದ್ದರು.
ಅವರು ಕೂಡಾ ಇದೇ ಸಂದರ್ಭದಲ್ಲಿ ಕಾರ್ಮಿಕ ಮತ್ತು ಉದ್ಯೋಗ
ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ರಾಷ್ಟ್ರೀಯ ಜನತಾ ದಳದ
ಜಯಪ್ರಕಾಶ್ ನಾರಾಯಣ್ ಅವರು ರಾಜ್ಯ ದರ್ಜೆ ಸಚಿವರಾಗಿ ಅಧಿಕಾರ
ವಹಿಸಿಕೊಂಡರು. ಪ್ರಣಬ್ ಮುಖರ್ಜಿ ಅವರಿಗೆ ವಿದೇಶಾಂಗ ವ್ಯವಹಾರ,
ಮಣಿಶಂಕರ್ ಅಯ್ಯರ್ ಅವರಿಗೆ ಪಂಚಾಯತ್ ರಾಜ್, ಯುವಜನ
ವ್ಯವಹಾರ, ಕ್ರೀಡಾ ಖಾತೆ ಹಾಗೂ ಚಂದ್ರಶೇಖರ್ ಸಾಹು ಅವರಿಗೆ
ಗ್ರಾಮೀಣ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಸ್ಥಾನ ಲಭಿಸಿದೆ.
ಅಂಬರೀಷ್ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಿರುವುದರಿಂದ
ಒಕ್ಕಲಿಗರಿಗೆ ಕೇಂದ್ರದಲ್ಲಿ ಸ್ಥಾನ ನೀಡಿಲ್ಲ ಎನ್ನುವ ಕರ್ನಾಟಕ
ಕಾಂಗ್ರೆಸಿಗರ ಅಸಮಧಾನ ನಿವಾರಿಸಿದಂತಾಗಿದೆ. ಕೇಂದ್ರದಲ್ಲಿ ಕರ್ನಾಟಕ
ಸಚಿವರ ಸಂಖ್ಯೆ ನಾಲ್ಕಕ್ಕೇರಿದೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|