Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 21 October 2006 04:48 PM

ಗುಟ್ಕಾ ನಿಷೇಧ: ಅಡಿಕೆ ಬೆಳೆಗಾರರಲ್ಲಿ ಭೀತಿ

 

ಬೆಂಗಳೂರು: ಗುಟ್ಕಾ ನಿಷೇಧಿಸುವುದಾಗಿ ಕೇಂದ್ರ ಆರೋಗ್ಯ ಸಚಿವರು ಹೇಳಿದ್ದು ಅಡಿಕೆ ಬೆಳೆಗಾರರಲ್ಲಿ ಅಡಿಕೆಯ ಬೆಲೆ ಇಳಿಕೆಯ ಭೀತಿ ಮೂಡಿಸಿದೆ. ಈ ವರ್ಷ ಅಡಿಕೆ ಬೆಳೆ ಕೂಡಾ ಕಡಿಮೆ ಆಗಿದ್ದರಿಂದ ರೈತರು ಒಳ್ಳೆಯ ಬೆಲೆಯನ್ನು ನಿರೀಕ್ಷಿಸುತ್ತಿದ್ದರು. ಆದರೆ ಕೇಂದ್ರ ಆರೋಗ್ಯ ಸಚಿವರು ಗುಟ್ಕಾದ ಮೇಲೆ ನಿಷೇಧ ಹೇರಲು ವಿಚಾರ ಮಾಡುತ್ತಿರುವುದಾಗಿ ಹೇಳಿದ್ದರಿಂದ ಅಡಿಕೆ ಬೆಲೆ ಕುಸಿದಿದೆ.
 

`ಆರೋಗ್ಯ ಸಚಿವರ ಹೇಳಿಕೆ ಅಡಿಕೆ ಉದ್ಯಮದಲ್ಲಿ ಕೋಲಾಹಲವನ್ನೇ ಉಂಟುಮಾಡಿದೆ. ಪ್ರತಿ ವರ್ಷ ಅಡಿಕೆ ಬೆಲೆ ಏರುತ್ತಿದೆ ಎನ್ನುವಷ್ಟರಲ್ಲಿ ಈ ಬಿಕ್ಕಟ್ಟು ತಲೆ ದೋರುತ್ತಿದೆ. ಸುಮಾರು ೪.೫ ಲಕ್ಷ ಟನ್ ಅಡಿಕೆ ಉತ್ಪಾದನೆ ಆಗುತ್ತಿದ್ದು ಇದರಲ್ಲಿ ಮುಕ್ಕಾಲು ಪಾಲು ಗುಟ್ಕಾ ತಯಾರಿಕೆಗೇ ಹೋಗುತ್ತದೆ. ಗುಟ್ಕಾವನ್ನು ನಿಷೇಧ ಮಾಡಿದ್ದಲ್ಲಿ ಅಡಿಕೆಯನ್ನೆ ನಂಬಿಕೊಂಡ ೬೫ ಲಕ್ಷ ಜನರು ಬೀದಿಪಾಲಾಗಲಿದ್ದಾರೆ. ಅಪಾಯ ಅಡಿಕೆಯಿಂದಲ್ಲದೆ ಗುಟ್ಕಾದಿಂದ. ಆದ್ದರಿಂದ ಗುಟ್ಕಾದಲ್ಲಿ ಬಳಸುವ ಹಾನಿಕಾರಕ ರಾಸಾಯನಿಕಗಳನ್ನು ಬಳಸದಂತೆ ಸರ್ಕಾರ ನಿಯಂತ್ರಣ ಹೇರಬೇಕು' ಎಂದು ಗುರುವಾರ ವಿಧಾನಸೌಧದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಡಿ.ಸಿ. ಶ್ರೀಕಂಠಪ್ಪ ಮತ್ತು ಶಾಸಕ ಅರಗ ಜ್ಞಾನೇಂದ್ರ ಹೇಳಿದ್ದಾರೆ.

 

ಇನ್ನಷ್ಟು

ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ

ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ

ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ

ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್

೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್

ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ

ನೈಸರ್ಗಿಕ ಕೃಷಿಗೆ ಮಾರು ಹೋದ ಮಠ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com