|
ಪೊಲೀಸರ ಮೈಮೇಲೇ ಬಿದ್ದ ಬಿದ್ದಪ್ಪನ ಪುತ್ರ
ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ
ಮೇಲೆ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆಡಂ
ಬಿದ್ದಪ್ಪನನ್ನು ನಗರದ ಪೊಲೀಸರು ಗುರುವಾರ ರಾತ್ರಿ
ಬಂಧಿಸಿದ್ದಾರೆ.
ಹಿನ್ನೆಲೆ: ಮಧ್ಯ ರಾತ್ರಿ ಕಳೆದರೂ ತನ್ನ ವಹಿವಾಟನ್ನು ಮುಗಿಸದ
ರೆಸಿಡೆನ್ಸಿ ರಸ್ತೆಯಲ್ಲಿರುವ `ಸ್ಪಿನ್' ಪಬ್‌ನ್ನು ಮುಚ್ಚಲು ರಾತ್ರಿ
ಪಾಳಿಯಲ್ಲಿರುವ ಡಿಸಿಪಿ ಜಿ. ಬಿ. ಛಬ್ಬಿ ಹೇಳಿದಾಗ ಪಬ್‌ನಲ್ಲಿದ್ದ ಆಡಂ
ಪೊಲೀಸರನ್ನು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಕ್ಕಾಗಿ
ಬಂಧಿಸಲಾಯಿತು. ಮಗನ ಬಂಧನದ
ಸುದ್ದಿ ತಿಳಿದು ಸ್ಟೇಷನ್‌ಗೆ ಆಗಮಿಸಿದ ಪ್ರಸಾದ್ ಬಿದ್ದಪ್ಪ ಅವರ ಪತ್ನಿ
ಕೂಡಾ ಛಬ್ಬಿ ಮೆಲೆ ಹಲ್ಲೆ ನಡೆಸಿದರು ಎಂದು ಹೇಳಲಾಗಿದೆ.
ಸುದ್ದಿಗಾರರಲ್ಲಿ ಅಳಲು ತೋಡಿಕೊಂಡ ಪ್ರಸಾದ್:
ಪತ್ರಿಕಾಗೋಷ್ಠಿಯನ್ನು ಕರೆದು ಪ್ರಸಾದ್ ಬಿದ್ದಪ್ಪ `ನನ್ನನ್ನು ಲಂಚ
ಕೊಡುವಂತೆ ಪೊಲೀಸರು ಕೇಳಿದರು. ಆದರೆ ನಾನು ನಿರಾಕರಿಸಿದ್ದಕ್ಕಾಗಿ
ನನ್ನ ಮಗನನ್ನು ಬಂಧಿಸಿದ್ದಾರೆ' ಎಂದು ಆರೋಪಿಸಿದ್ದಾರೆ. ಗೃಹ
ಸಚಿವ ಎಂ. ಪಿ. ಪ್ರಕಾಶ್ ಫೋನ್ ಮಾಡಿ ಸಮಾಧಾನ
ಹೇಳಿರುವುದಾಗಿಯೂ ಪ್ರಸಾದ್ ಹೇಳಿಕೊಂಡಿದ್ದರು. ಆದರೆ ಎಂ. ಪಿ.
ಪ್ರಕಾಶ್ ಇದನ್ನು ಸರಾಸಗಟವಾಗಿ ತಿರಸ್ಕರಿಸಿದ್ದಾರೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|