|
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಬೆಳಗಾವಿ: ವಿಧಾನ ಪರಿಷತ್ ಸದಸ್ಯ, ಬೆಳಗಾವಿಯ ಕೆಎಲ್‌ಇ
ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಣ್ಣನ ಮಗನಿಂದ
ಗುಂಡೇಟಿಗೆ ಒಳಗಾಗಿದ್ದಾರೆ. ಅವರ ದೇಹ ಸ್ಥಿತಿ ಗಂಭಿರವಾಗಿದ್ದು
ಕೆಎಲ್‌ಇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಗುರುವಾರ ಕೋರೆ ಸ್ವಂತ ಮಾಲೀಕತ್ವದ ಚಿತ್ರಮಂದಿರದ
ಕಾಮಗಾರಿಯನ್ನು ವೀಕ್ಷಿಸಲು ತಮ್ಮ ಊರಾದ ಅಂಕಲಿಗೆ ತೆರಳಿದ್ದರು.
ಚಿತ್ರ ಮಂದಿರದ ಕಚೇರಿಯಲ್ಲೇ ಕೋರೆಯವರ ಅಣ್ಣನ ಮಗನಾದ
ಜಗದೀಶ ಕೋರೆ ಅವರ ಮೇಲೆ ಗುಂಡನ್ನು ಹಾರಿಸಿದ್ದಾನೆ. ಈ ಘಟನೆ
ಮಧ್ಯಾಹ್ನ ಸುಮಾರು ೧೨. ೪೫ ಕ್ಕೆ ನಡೆದಿದೆ.
ಒಟ್ಟು ೪ ಗುಂಡುಗಳನ್ನು ಹಾರಿಸಲಾಗಿದ್ದು, ಎರಡು ಪಕ್ಕೆಲುಬಿಗೆ,
ಇನ್ನೊಂದು ಬೆನ್ನಿಗೆ, ಮತ್ತೊಂದು ಗುಂಡು ಹಿಂಬದಿ ಸೊಂಟದ ಹತ್ತಿರ
ಬಡಿದಿದೆ. ತುರ್ತು ಶಸ್ತ್ರಚಿಕಿತ್ಸೆಗಳನ್ನು ಕೆಎಲ್‌ಇ ಆಸ್ಪತ್ರೆಯಲ್ಲೇ
ಕೈಗೊಂಡು ಅತೀ ಮುಖ್ಯ ಶಸ್ತ್ರ ಚಿಕಿತ್ಸೆ ಮಾಡಲು ಮುಂಬೈಗೆ
ಕರೆದೊಯ್ಯುವ ತೀರ್ಮಾನ ವೈದ್ಯರು ಮಾಡಿರುವುದಾಗಿ
ಹೇಳಲಾಗಿದೆ.
ಜಗದೀಶ ಕೋರೆ ಹಲ್ಲೆ ಎಸಗಿ ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದಾನೆ
ಎಂದು ಊಹಿಸಲಾಗಿದ್ದು ಪೊಲೀಸರು ವ್ಯಾಪಕ ಶೋಧನೆ
ಕೈಗೊಂಡಿದ್ದಾರೆ.
ಇನ್ನಷ್ಟು
ಭಾರತದಲ್ಲಿ ತಲೆ
ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ
ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ
ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್
ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ
ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ
ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ
ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ :
ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ
ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ
ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ
ಮಾದರಿಯಲ್ಲಿ
|