|
ಜನವರಿಗೆ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ
ಉಜಿರೆ: ಧರ್ಮಸ್ಥಳದಲ್ಲಿನ ಬಾಹುಬಲಿ ಮೂರ್ತಿಗೆ
ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಮುಂದಿನ ವರ್ಷ
ಜನವರಿಯಲ್ಲಿ ನಡೆಸಲಾಗುವುದು ಎಂದು ಧರ್ಮಸ್ಥಳದ
ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿ ಸ್ಥಾಪಿಸಿ ೨೫ ವರ್ಷ ಪೂರೈಸಿದ
ಹಿನ್ನೆಲೆಯಲ್ಲಿ ಮುಂದಿನ ವರ್ಷ ಜನವರಿ ೨೮ ರಿಂದ ಫೆಬ್ರವರಿ ೨ರ
ವರೆಗೂ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು
ಹಮ್ಮಿಕೊಳ್ಳಲಾಗಿದೆ.
ಆಚಾರ್ಯ ಶ್ರೀ ೧೦೮ ವರ್ಧಮಾನ ಸಾಗರ ಮುನಿ ಮಹಾರಾಜ್ ಅವರ
ನೇತೃತ್ವದಲ್ಲಿ ನಡೆಸಲಾಗುವ ಈ ಮಹೋತ್ಸವಕ್ಕೆ ಅಪಾರ
ಜನಸಮೂಹ ಆಗಮಿಸುವ ನೀರಿಕ್ಷೆಯಿದೆ ಎಂದು ಡಾ. ವಿರೇಂದ್ರ ಹೆಗ್ಗಡೆ
ಹೇಳಿದ್ದಾರೆ.
ಪಾರ್ಶ್ವನಾಥ ತೀರ್ಥಂಕರರ `ಪಂಚಕಲ್ಯಾಣ ಮಹೋತ್ಸವ' ಮತ್ತು
ಧಾರ್ಮಿಕ ಸಮ್ಮೆಳನವನ್ನು ಈ ಸಂದರ್ಭದಲ್ಲಿ
ನೆರವೇರಿಸಲಾಗುವುದು. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ
ಯೋಜನೆಯ ರಜತ ಮಹೋತ್ಸವವನ್ನು ಹಮ್ಮಿಕೊಂಡಿರುವುದಾಗಿ
ವಿರೇಂದ್ರ ಹೆಗ್ಗಡೆಯವರು ಹೇಳಿದರು.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|