|
ಮೈಸೂರಿನಲ್ಲಿ ಆರ್.ಕೆ.ನಾರಾಯಣ್ ಪ್ರತಿಮೆ ಸ್ಥಾಪನೆ
ಮೈಸೂರು: ಖ್ಯಾತ ಲೇಖಕ ಆರ್.ಕೆ. ನಾರಾಯಣ್ ಅವರು
ಸಾಹಿತ್ಯ ಲೋಕಕ್ಕೆ ನೀಡಿರುವ ಗಣನೀಯ ಕೊಡುಗೆಯನ್ನು
ಸ್ಮರಿಸುವ ನಿಟ್ಟಿನಲ್ಲಿ ನಗರದಲ್ಲಿ ಆರ್.ಕೆ. ನಾರಾಯಣ್ ಅವರ
ಪ್ರತಿಮೆಯನ್ನು ಸರ್ಕಾರ ಸ್ಥಾಪಿಸಲಿದೆ.
ವಿಶ್ವಶ್ರೇಷ್ಠ ಲೇಖಕ ಆರ್‌ಕೆಎನ್ ಅವರ ಪ್ರತಿಮೆಯನ್ನು ಮೈಸೂರಿನ
ಹರ್ಡಿಂಗೆ ಸರ್ಕಲ್ ಹತ್ತಿರದ ಮಕ್ಕಳ ಉದ್ಯಾನವನ(ಯೆಜ್ಡಿ ಪಾರ್ಕ್)
ಹೊಂದಲಿದೆ.

ಆರ್.ಕೆ. ನಾರಾಯಣ್ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಅವರ
ಪ್ರತಿಮೆಗಳ ನಿರ್ಮಾಣ ಕಾರ್ಯ ಒಟ್ಟಿಗೆ ಆಗಲಿದೆ. ಈ ಬಗ್ಗೆ ಮೈಸೂರು
ನಗರಾಭಿವೃದ್ಧಿ ಪ್ರಾಧಿಕಾರದ ಮುಂದಿನ ಸಭೆಯಲ್ಲಿ
ನಿರ್ಧರಿಸಲಾಗುವುದು ಎಂದು ನಗರದ ಉಪ ಆಯುಕ್ತರು
ಹೇಳಿದ್ದಾರೆ.
ಸ್ಮಾರಕ ನಿರ್ಮಾಣದ ಜೊತೆಗೆ, ಸಣ್ಣದಾದ
ವಸ್ತುಸಂಗ್ರಹಾಲಯವನ್ನು ನಿರ್ಮಿಸಿ ಮಹಾನ್ ಲೇಖಕನ ಕೃತಿಗಳ
ಪರಿಚಯವನ್ನು ಎಲ್ಲರಿಗೂ ಮಾಡುವುದು ನಮ್ಮ ಉದ್ದೇಶ ಎಂದು
ಆಯುಕ್ತ ಎಸ್. ಸೆಲ್ವ ಕುಮಾರ್ ಸುದ್ದಿಗಾರರಿಗೆ ಹೇಳಿದ್ದಾರೆ.
ಇದಕ್ಕೂ ನಾಗರಿಕರ ಸಮಿತಿಯೊಡನೆ ಆಯುಕ್ತರು ಚರ್ಚೆ
ನಡೆಸಿದ್ದರು. ಚರ್ಚೆಯಲ್ಲಿ ಖ್ಯಾತ ಛಾಯಾಗ್ರಾಹಕ ಟಿ.ಎಸ್.
ಸತ್ಯನ್. ಪಿ.ವಿ. ಗಿರಿ, ಬಿ. ಆರ್. ಪೈ ಹಾಗೂ ಎಂ. ಲಕ್ಷ್ಮಣ
ಮುಂತಾದವರು ಭಾಗವಹಿಸಿದ್ದರು.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|