|
ಬಾಂಗ್ಲಾದ ಯುನಸ್‌ರಿಗೆ ನೊಬೆಲ್ ಶಾಂತಿ ಪುರಸ್ಕಾರ
ಢಾಕಾ: ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್ ಮತ್ತು ಅದರ
ಸಂಸ್ಥಾಪಕ ಪ್ರೊಫೆಸರ್ ಮೊಹಮ್ಮದ್ ಯೂನಸ್ ಈ ವರ್ಷದ
ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಯೂನಸ್ ಅವರು ಸ್ಥಾಪಿಸಿದ ಬ್ಯಾಂಕ್ ಬಡ ಗ್ರಾಮೀಣ ಜನರಿಗೆ
ಸ್ವಉದ್ಯೋಗ ಪ್ರಾರಂಭಿಸಲು ಸಾಲವನ್ನು ನೀಡುತ್ತದೆ. ಚಿಕ್ಕ ಆರ್ಥಿಕ
ಸಂಘಟನೆಯಂತೆ ಕೆಲಸಮಾಡುವ ಈ ಬ್ಯಾಂಕ್ ಆರ್ಥಿಕ ಕೆಳ ಸ್ತರದಲ್ಲಿ
ಬಹಳ ಜನಪ್ರಿಯವಾಗಿದೆ.
ದೊಡ್ಡ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಅಸಮರ್ಥವಾಗಿರುವವರಿಗೆ ಈ
ಬ್ಯಾಂಕ್ ಸಾಲ ನೀಡಿ ಸಹಾಯ ಮಾಡಿದೆ.
ನಾರ್ವೆಯಲ್ಲಿರುವ ನೊಬೆಲ್ ಪುರಸ್ಕಾರ ಸಮಿತಿ `ಯೂನಸ್ ಅವರು
ತಮ್ಮ ಉನ್ನತ ವಿಚಾರವನ್ನು ಕಾರ್ಯರೂಪಕ್ಕೆ ತಂದು
ಬಾಂಗ್ಲಾದೇಶದ ಲಕ್ಷಾಂತರ ಜನರಿಗೆ ಉಪಕಾರ ಮಾಡಿದ್ದಾರೆ' ಎಂದು
ಅಭಿಪ್ರಾಯಪಟ್ಟಿದೆ.
ಪ್ರೊಫೆಸರ್ ಯೂನಸ್ ತಮ್ಮನ್ನು ನೊಬೆಲ್ ಪುರಸ್ಕಾರಕ್ಕೆ
ಆಯ್ಕೆ ಮಾಡಿರುವುದಕ್ಕೆ ಸಂತೋಷ ವ್ಯಕ್ತ ಪಡಿಸಿದ್ದಾರೆ.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|