ಇಂಫಾಲ: ಸೋಮವಾರ ರಾಷ್ಟ್ರಪತಿ ಅಬ್ದುಲ್ ಕಲಾಂ ಮಣಿಪುರ
ವಿಶ್ವ ವಿದ್ಯಾಲಯದ ೧೦ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು
ಮಣಿಪರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಗ್ರರ
ಚಟುವಟಿಕೆ ನಿಯಂತ್ರಿಸಲು ಸೈನ್ಯಕ್ಕೆ ನೀಡಿರುವ ಅಪರಿಮಿತ
ಅಧಿಕಾರವನ್ನು ಮುಂದುವರಿಸುವ ಶಾಸನವನ್ನು ವಿರೋಧಿಸಿ
ಪ್ರತಿಭಟನೆಗೆ ಸ್ಥಳೀಯ ಸಂಘಟನೆಗಳು ಕರೆ ನೀಡಿವೆ.
`ಉಗ್ರರ ನಿಗ್ರಹದ ಹೆಸರಲ್ಲಿ ನಿರಂತರವಾಗಿ ಮಾನವ ಹಕ್ಕುಗಳ
ಉಲ್ಲಂಘನೆಯಾಗುತ್ತಿರುವುದರ ವಿರುದ್ಧ ನಮ್ಮ ಹೋರಾಟವಾಗಿದೆ'
ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.