ನವದೆಹಲಿ: ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ
ಪ್ರಾಧಿಕಾರ(ಐಟಿಡಿಸಿ) ೪.೪೪ ಕೋಟಿ ರೂ. ನಷ್ಟದಿಂದ ಹೊರಬಂದು ೧೦.೬೫
ಕೋಟಿ ರೂ. ಲಾಭವನ್ನು ಮೊದಲರ್ಧದ ಆರ್ಥಿಕ ವರ್ಷದಲ್ಲೇ
ಗಳಿಸಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ. ೩೪೦ ರಷ್ಟು ಲಾಭಾಂಶ
ಏರಿಕೆಯಾಗಿದೆ. ಇದರಲ್ಲಿ ಹೋಟೆಲ್ ವಿಭಾಗವೇ ೭.೭ ಕೋಟಿ ರೂ.
ಲಾಭ ಗಳಿಸಿದೆ ಎನ್ನುವ ಮಾಹಿತಿಯನ್ನು ಗುರುವಾರ ಐಟಿಡಿಸಿಯ
ವ್ಯವಸ್ಥಾಪಕ ನಿರ್ದೇಶಕ ಪರ್ವೇಜ್ ದಿವಾನ್ ಸುದ್ದಿಗಾರರಿಗೆ ತಿಳಿಸಿದರು.