Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 13 October 2006 04:03 PM

ಐಐಎಸ್‌ಸಿಯಿಂದ ಸಣ್ಣ ಕಥೆ ಸ್ಪರ್ಧೆಗೆ ಅರ್ಜಿ ಆಹ್ವಾನ

 

ಬೆಂಗಳೂರು: ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ(ಐಐಎಸ್‌ಸಿ)ಯ ಕನ್ನಡ ವಿದ್ಯಾರ್ಥಿಗಳ ಬಳಗವು `ಕನ್ನಡ ರಾಜ್ಯೋತ್ಸವ'ದ ಅಂಗವಾಗಿ `ಸಣ್ಣಕಥೆ ಸ್ಪರ್ಧೆ'ಯನ್ನು ನಡೆಸುತ್ತಿದ್ದಾರೆ. ಆಸಕ್ತರು ಕಥೆಗಳನ್ನು ಅಕ್ಟೋಬರ್ ೨೫ ರ ಒಳಗಾಗಿ ಕಳುಹಿಸಬಹುದು. ಕಥೆಗಳನ್ನು ಈ ಮೈಲ್ ಮೂಲಕವೂ ಕಳಿಸಬಹುದು ಹಾಗೂ ಹಸ್ತಪ್ರತಿಯನ್ನು ಅಂಚೆಯ ಮೂಲಕ ಕಳುಹಿಸಬಹುದು.


ಕಥೆ ಬರೆಯುವವರಿಗಾಗಿ ಕೆಲವು ನಿಯಮಾವಳಿಗಳು:

 

ಕಥೆಗಳು ಕನ್ನಡದಲ್ಲಿ ಬರೆದುದಾಗಿದ್ದು ೧೦೦೦ ಪದಗಳನ್ನು ಮೀರಬಾರದು. ಈ ಮೇಲ್ ಮಾಡುವವರು ಬರಹ ಲಿಪಿ(ಫಾಂಟ್) ಉಪಯೋಗಿಸಿ ಟೈಪ್ ಮಾಡಿದ ಕಥೆಯನ್ನು ಕಳಿಸತಕ್ಕದ್ದು.
ಕಥೆ ಸ್ವಂತದ್ದಾಗಿರಬೇಕು. ಅನುವಾದಿತ ಕಥೆಗಳಿಗೆ ಅವಕಾಶವಿಲ್ಲ.
ಕಥೆ ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು.

ಒಬ್ಬರು ಗರಿಷ್ಠ ಎರಡು ಕಥೆಗಳನ್ನು ಕಳುಹಿಸಬಹುದು.
ಕಥೆಯ ಜೊತೆಗೆ ಲೇಖಕರ ಹೆಸರು, ಅಂಚೆವಿಳಾಸ, ದೂರವಾಣಿ ಸಂಖ್ಯೆ, ಈ ಮೇಲ್ ವಿಳಾಸ ಬರೆಯತಕ್ಕದ್ದು.
ಅಂತಿಮ ತೀರ್ಮಾನ ತೀರ್ಪುಗಾರರದ್ದು.
 

   ಕಥೆಗಳನ್ನು ಹೆಸರಾಂತ ಕನ್ನಡ ಲೇಖಕರಿಂದ ಮೌಲ್ಯಮಾಪನ ಮಾಡಿಸಲಾಗುವುದು. ಬಹುಮಾನಿತ ಕಥೆಗಳನ್ನು ಐಐಎಸ್‌ಸಿ ಕನ್ನಡ ಬಳಗದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗುವುದು. ಬಹುಮಾನಗಳನ್ನು ನವೆಂಬರ್ ೧ ರಂದು ನಡೆಯುವ `ರಾಜ್ಯೋತ್ಸವ ಸಮಾರಂಭ'ದಲ್ಲಿ ವಿತರಿಸಲಾಗುವುದು.
 

ಕಥೆಗಳನ್ನು ಕಳಿಸಬೇಕಾದ ವಿಳಾಸ:

ಪೂರ್ಣಿಮಾ ಪ್ರಿಯಾದರ್ಶಿನಿ. ಸಿ. ಜಿ.
c/o, ಪ್ರೋ. ಹೆಚ್. ಎಸ್. ಸಾವಿತ್ರಿ
ಬಯೋಕೆಮಿಸ್ಟ್ರಿ ವಿಭಾಗ,
ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ,
ಬೆಂಗಳೂರು-೫೬೦ ೦೧೨.

ಈ ಮೇಲ್ ಮೂಲಕ ಕಳುಹಿಸಬೇಕಾದ ವಿಳಾಸ: nityotsava@gmail.com

ಹೆಚ್ಚಿನ ವಿವರಗಳಿಗಾಗಿ ಐಐಎಸ್ಸಿಯ ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ- http://www.nityotsava.org/

 

ಇನ್ನಷ್ಟು

ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್

ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ

ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ

ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್

ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ

ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ

ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್

ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್

ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ

ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ

ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com