|
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಸಾನ್ ಫ್ರಾನ್ಸಿಸ್ಕೋ: ವಿಡಿಯೋ ಹಂಚಿಕೆಗೆ ಹೆಸರಾದ ಯೂಟೂಬ್
ವೆಬ್ ಸೈಟನ್ನು ಗೂಗಲ್ ಸಂಸ್ಥೆ ೧.೬೫ ಬಿಲಿಯನ್ ಡಾಲರ್ ಮೊತ್ತ
ನೀಡಿ ಖರೀದಿಸಿದೆ.
ಪ್ರತಿದಿನ ಸುಮಾರು ೧೦೦ ಮಿಲಿಯನ್ ವೀಕ್ಷಕರನ್ನು ಹೊಂದಿರುವ
ಯೂಟೂಬ್ ವೆಬ್ ಸೈಟ್ ಪ್ರಾರಂಭವಾಗಿ ಇನ್ನೂ ೨ ವರ್ಷ ಕೂಡ
ಕಳೆದಿಲ್ಲ. ಕೇವಲ ೬೫ ಜನ ಉದ್ಯೋಗಿಗಳನ್ನು ಹೊಂದಿರುವ ಯೂಟೂಬ್
ಸಂಸ್ಥೆ ಕ್ಯಾಲಿಫೋರ್ನಿಯಾದ ಬ್ರೂನೊದಿಂದ ಕಾರ್ಯನಿರ್ವಹಿಸುತ್ತಿದೆ.
ವೀಕ್ಷಕರು ತಮ್ಮ ವಿಡಿಯೋಗಳನ್ನು ಹಾಕಲು ಯೂಟೂಬ್ ಮುಕ್ತ
ಅವಕಾಶ ನೀಡಿದೆ.
ಗೂಗಲ್ ಸಂಸ್ಥೆ ಅಧಿಕಾರ ವಹಿಸಿಕೊಂಡ ನಂತರವೂ ಬ್ರೂನೊದಿಂದಲೇ
ಕಾರ್ಯನಿರ್ವಹಿಸುವುದಾಗಿ ಗೂಗಲ್ ಸಂಸ್ಥೆಯ ವಕ್ತಾರರು
ಹೇಳಿದ್ದಾರೆ. ಅಲ್ಲದೆ ಸೋನಿ ಬಿಎಂಜಿ ಹಾಗೂ ವಾರ್ನರ್ ಗ್ರೂಪ್ ಜೊತೆಗೆ
ಗೂಗಲ್ ಸಂಸ್ಥೆ ಹೊಂದಾಣಿಕೆ ಮಾಡಿಕೊಂಡಿದ್ದು, ಉತ್ತಮ
ಗುಣಮಟ್ಟದ ವಿಡಿಯೋ ಪ್ರಸಾರದ ಗುರಿ ಹೊಂದಿದೆ.
ಕಳೆದ ವರ್ಷ ಗೂಗಲ್ ಸಂಸ್ಥೆ ಸುಮಾರು ೧೩೦.೫ ದಶಲಕ್ಷ ಡಾಲರ್
ಖರ್ಚು ಮಾಡಿ ೧೫ಕ್ಕೂ ಅಧಿಕ ಸಣ್ಣ ಕಂಪೆನಿಗಳನ್ನು ಖರೀದಿ ಮಾಡಿತ್ತು.
ಇನ್ನಷ್ಟು
ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ
ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ
ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ
ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
|