|
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ನವದೆಹಲಿ: ರಾಜ್ಯಪಾಲರು ಅಥವಾ ರಾಷ್ಟ್ರಪತಿ
ಅಪರಾಧಿಯೊಬ್ಬನಿಗೆ ನೀಡಿದ ಕ್ಷಮಾದಾನ ಅದರ ವ್ಯಾಪ್ತಿಯನ್ನು
ಮೀರಿದ್ದಲ್ಲಿ ಅದು ನ್ಯಾಯಾಂಗದ ಪರಿಶೀಲನೆಗೆ ಅರ್ಹವಾಗಿದೆ ಎಂದು
ಸರ್ವೋಚ್ಚ ನ್ಯಾಯಾಲಯ ಬುಧವಾರ ತೀರ್ಪಿತ್ತಿದೆ.
ಹಿನ್ನೆಲೆ: ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ
ನ್ಯಾಯಾಲಯ ಕಾಂಗ್ರೆಸ್ ಕಾರ್ಯಕರ್ತನೊಬ್ಬನಿಗೆ ೧೦ ವರ್ಷಗಳ
ಜೈಲು ವಿಧಿಸಿತ್ತು. ಆದರೆ ಆಂಧ್ರಪ್ರದೇಶದ ಮಾಜಿ ರಾಜ್ಯಪಾಲ ಸುಶೀಲ್
ಕುಮಾರ್ ಶಿಂಧೆ (ಈಗ ಕೇಂದ್ರದಲ್ಲಿ ವಿದ್ಯುತ್ ಸಚಿವ) ಅವರು
ಶಿಕ್ಷೆಯನ್ನು ರದ್ದುಗೊಳಿಸಿದ್ದರು.
ಶಿಂಧೆಯ ಕ್ರಮವನ್ನು ಸರ್ವೋಚ್ಚ ನ್ಯಾಯಾಲಯ ತೀವ್ರ
ತರಾಟೆಗೆ ತೆಗೆದುಕೊಂಡಿತು. ಕ್ಷಮಾದಾನ ನೀಡುವಾಗ ಅವನಿಂದ
ನೊಂದ ಕುಟುಂಬದ ನೋವನ್ನು ಕೂಡಾ ಗಮನ
ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಶಿಂಧೆ ರಾಜ್ಯಪಾಲರಾಗಿದ್ದಾಗ ನೀಡಿದ ಕ್ಷಮಾದಾನ ಆದೇಶವನ್ನು ರದ್ದು
ಪಡಿಸುವಂತೆ ಕೋರಿ ಮೃತ ವ್ಯಕ್ತಿಯ ಪುತ್ರರು ಸರ್ವೋಚ್ಚ
ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಇನ್ನಷ್ಟು
ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ
ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ
ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ
ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
|