Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 12 October 2006 12:14 PM

ದೇಶ ವಿರೋಧಿಗಳಿಗೆ ಜಾಗ ನೀಡಿದ ಗೂಗಲ್ಗೆ ನೋಟೀಸ್

 

ಮುಂಬಯಿ: ಗೂಗಲ್ `ಆರ್‌ಕುಟ್' ಎನ್ನುವ ಸಾಮಾಜಿಕ ಅಂತರ್ಜಾಲದ ಮೂಲಕ ದೇಶ ವಿರೋಧಿ ಭಾವನೆ ಬೆಳೆಸುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರ ಗೂಗಲ್ ಸಂಸ್ಥೆಗೆ ನೋಟೀಸ್ ನೀಡುವಂತೆ ಮುಂಬಯಿ ಉಚ್ಚ ನ್ಯಾಯಾಲಯದ ಔರಂಗಾಬಾದ್ ಪೀಠ ಹೇಳಿದೆ.

 

ವಕೀಲ ಯುಗಾಂತ್ ಮರ್‍ಲಪಲ್ಲೆ ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ನೋಟೀಸನ್ನು ಜಾರಿ ಮಾಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
 

ಸುಟ್ಟು ಹಾಕುತ್ತಿರುವ ತ್ರಿವರ್ಣ ಧ್ವಜದ ಚಿತ್ರದೊಂದಿಗೆ `ನಾವು ಭಾರತವನ್ನು ವಿರೋಧಿಸುತ್ತೇವೆ' (ವಿ ಹೇಟ್ ಇಂಡಿಯಾ) ಎನ್ನುವ ಘೋಷಣೆ ಹೊಂದಿರುವ, ದೇಶದ ಬಗ್ಗೆ ಅಗೌರವ ಮೂಡಿಸುವ ಕಮ್ಯುನಿಟಿಯನ್ನು ಗೂಗಲ್ ಸಂಸ್ಥೆಗೆ ಸೇರಿದ ಆರ್‌ಕುಟ್ ಸೈಟ್‌ನಲ್ಲಿ ರೂಪಿಸಲಾಗಿದೆ ಎಂದು ಆರೋಪ ಮಾಡಲಾಗಿದೆ.

 


 

 

 

ಇಂಥ ದೇಶ ದ್ರೋಹಿ ಕಮ್ಯುನಿಟಿಗಳನ್ನು ಅಂತರ್ಜಾಲದಲ್ಲಿ ರೂಪಿಸುವುದನ್ನು ತಡೆಯಲು `ಮಾಹಿತಿ ಮತ್ತು ತಂತ್ರಜ್ಞಾನ-೨೦೦೦' ಕಾನೂನಿನ ಅಡಿಯಲ್ಲಿ `ಕಂಟ್ರೋಲರ್'ಗಳನ್ನು ಸರ್ಕಾರ ನೇಮಿಸಬೇಕು ಎಂದು ಅರ್ಜಿಯಲ್ಲಿ ಕೇಳಿ ಕೊಳ್ಳಲಾಗಿದೆ.
 

`ಆರ್‌ಕುಟ್' ಎನ್ನುವುದು ಸಮಾನ ಆಸಕ್ತಿ ಹೊಂದಿರುವ ಜನರನ್ನು ಸ್ನೇಹಿತರನ್ನಾಗಿಸುವ, ವಿಚಾರಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ವೇದಿಕೆಯನ್ನೊದಗಿಸುವ ಆನ್‌ಲೈನ್ ಕಮ್ಯೂನಿಟಿಯಾಗಿದೆ.
 

`ಆರ್‌ಕುಟ್ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ನಾವು ನಮ್ಮ ನಿಯಮಾವಳಿಗಳಿಗೆ ತಕ್ಕ ಹಾಗೆ ನಮ್ಮ ಸೇವೆಯನ್ನು ಒದಗಿಸುತ್ತೇವೆ. ಅಸಹ್ಯಕರವಾದ ಸಂಭಾಷಣೆ ಮತ್ತು ಹಿಂಸೆ ನಮ್ಮ ನಿಯಮಕ್ಕೆ ವಿರುದ್ಧವಾಗಿದೆ. ಆರ್‌ಕುಟ್‌ನ್ನು ಉಪಯೋಗಿಸುವವರು ಉಳಿದ ಆರ್ ಕುಟ್ ಸದಸ್ಯರಿಗೆ `ಇದು ಸುಳ್ಳು ಸುದ್ದಿ' ಎಂದು ವರದಿ ಮಾಡಬಹುದಾದ ವ್ಯವಸ್ಥೆಯೂ ಆರ್‌ಕುಟ್‌ನಲ್ಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್ ಸೂಕ್ತ ಕ್ರಮ ಕೈಗೊಳ್ಳುತ್ತದೆ' ಎಂದು ಈ ವಿವಾದಕ್ಕೆ ಪ್ರತಿಕ್ರಿಯಿಸುತ್ತಾ ಗೂಗಲ್ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

 

ಇನ್ನಷ್ಟು

ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ

ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ

ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ

೧೩ ಕೋಟಿ ಮಕ್ಕಳ ಭವಿಷ್ಯ ಕತ್ತಲೆಯಲ್ಲಿ

ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ

ಸಂಸ್ಕೃತಿ ಇಲಾಖೆಯಿಂದ `ಪ್ರತಿಭಾನ್ವೇಷಣೆ'

ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ

ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ

ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ

ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com