ನ್ಯೂಯಾರ್ಕ್: ನ್ಯೂಯಾರ್ಕ್‌ನ ಮನ್‌ಹಟನ್‌ನಲ್ಲಿ ಚಿಕ್ಕ
ವಿಮಾನವೊಂದು ಗಗನ ಚುಂಬಿ ಕಟ್ಟಡಕ್ಕೆ ಸುಮಾರು ಮಧ್ಯಾಹ್ನ
೨. ೩೦ (ಭಾರತೀಯ ಕಾಲಮಾನ ರಾತ್ರಿ ೧೨) ಕ್ಕೆ ಅಪ್ಪಳಿಸಿತು. ಈ
ಅವಘಡದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಇದು ಭಯೋತ್ಪಾದಕರ ಕೃತ್ಯವಲ್ಲ ಎಂದು ಫೆಡರಲ್ ತನಿಖಾ
ವಿಭಾಗ ಹೇಳಿದೆ. ಇದರ ಸಂಪೂರ್ಣ ತನಿಖೆ ನಡೆಸಲು ಅಮೆರಿಕಾ
ಅಧ್ಯಕ್ಷ ಜಾರ್ಜ್ ಬುಷ್ ಆದೇಶಿಸಿದ್ದಾರೆ.