|
ಆರ್ ವಿ ಕಾಲೇಜು ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಬೆಂಗಳೂರು: ಮಣ್ಣಿನ ರಸ್ತೆ, ಗುಡ್ಡಗಾಡಿನ ಹಾದಿ,
ನಗರದ ರಸ್ತೆ ಹೀಗೆ ಎಲ್ಲಾ ಬಗೆಯ ರಸ್ತೆಗಳಲ್ಲಿ ಸಂಚರಿಸಬಲ್ಲ
ವಿಶಿಷ್ಟ ಬಗೆಯ ವಾಹನವನ್ನು ನಗರದ ಆರ್ ವಿ ಇಂಜಿನಿಯರಿಂಗ್
ತಂಡದ ನಿರ್ಮಿಸಿದೆ.
ಪ್ರಿಟೋರಿಯಾದಲ್ಲಿ ಅಕ್ಟೋಬರ್ ೧೨ ಹಾಗೂ ೧೩ ರಂದು ನಡೆಯಲಿರುವ
ಆಟೊಮೊಬೈಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತಂಡ ಸಜ್ಜಾಗಿದೆ.
ಒಬ್ಬ ವ್ಯಕ್ತಿ ಕುಳಿತುಕೊಳ್ಳಬಹುದಾದ ನಾಲ್ಕು ಚಕ್ರದ ವಾಹನವನ್ನು
೧೧ ಜನ ಮೆಕಾನಿಕಲ್ ಇಂಜಿನೀಯರ್ ವಿದ್ಯಾರ್ಥಿಗಳು ರೂಪಿಸಿದ್ದಾರೆ. ದಕ್ಷಿಣ
ಆಫ್ರಿಕದಲ್ಲಿ ನಡೆಯುವ `ಮಿನಿ ಬಜಾ ಚಾಲೆಂಜ್' ಎಂಬ ಸ್ಪರ್ಧೆಯಲ್ಲಿ
ಭಾರತವನ್ನು ಆರ್‌ವಿ ಕಾಲೇಜಿನ ತಂಡ ಪ್ರತಿನಿಧಿಸಲಿದೆ.
ಈ ಆಲ್ ಟರೈನ್ ವೆಹಿಕಲ್(ಎಟಿವಿ)ನ ಬೆಲೆ ಸುಮಾರು ೪ ಲಕ್ಷ. ೩೦೦ ಸಿಸಿ
ಸಾಮರ್ಥ್ಯದ ವೃತ್ತಾಕಾರದ ಒಂದು ಪೆಟ್ರೋಲ್ ಇಂಜಿನ್ ಅನ್ನು ಈ
ವಾಹನ ಒಳಗೊಂಡಿದೆ.
ಕಳೆದ ವರ್ಷ ಜುಲೈನಲ್ಲಿ ಪ್ರಾರಂಭವಾದ ಈ ವಾಹನ ನಿರ್ಮಾಣ
ಯೋಜನೆಯು ಈಗ ಪೂರ್ಣಗೊಂಡು ಸಿದ್ಧವಾಗಿದೆ. ಕಳೆದ ವರ್ಷ
ನಡೆದ ಸ್ಪರ್ಧೆಯಲ್ಲಿ ವಿವಿಧ ದೇಶಗಳ ೮೯ ತಂಡಗಳು
ಭಾಗವಹಿಸಿದ್ದವು.
ಇನ್ನಷ್ಟು
ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ
ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ
ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ
ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
ಬಗೆ ಹರಿದ ಭಾಷಾ ಕಲಿಕಾ
ವಿವಾದ |