Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 12 October 2006 12:20 PM

ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ

 

ನವದೆಹಲಿ: ಸಿಬಿಐ ಮಂಗಳವಾರ ಶಸ್ತ್ರಾಸ್ತ್ರಗಳ ಮಾರಾಟಗಾರರು ಮತ್ತು ಮಧ್ಯವರ್ತಿಗಳ ಮನೆಗಳ ಮೇಲೆ ಹಠಾತ್ ಧಾಳಿ ನಡೆಸಿದೆ. ಜಾರ್ಜ್ ಫರ್ನಾಂಡಿಸ್ ರಕ್ಷಣಾ ಸಚಿವರಾಗಿದ್ದ ಕಾಲದಲ್ಲಿ ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದ ವಿಷಯವಾಗಿ ಬೆಂಗಳೂರು, ದೆಹಲಿ, ಮುಂಬೈ, ಸಂಗರೂರ್, ಗುರ್‌ಗಾಂವ್ ಮತ್ತು ಪುಣೆ ಸೇರಿದಂತೆ ದೇಶದ ೩೫ ಕಡೆಗಳಲ್ಲಿ ಸಿಬಿಐ ಧಾಳಿ ನಡೆಸಿದೆ.

ನೌಕಾಪಡೆಯ ಮಾಜಿ ಮುಖ್ಯ ಅಡ್ಮಿರಲ್ ಎಸ್. ನಂದಾ ಅವರ ಪುತ್ರ ಸುರೇಶ್ ನಂದಾ ಮನೆಯಲ್ಲಿ ೬೨.೫ ಲಕ್ಷ ರೂ. ಮತ್ತು ಸಹಾನಿ ಎನ್ನುವವರ ಮನೆಯಿಂದ ೪೮ ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿದಂತೆ ಸಿಬಿಐ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಜಯಾ ಜೇಟ್ಲಿ, ನೌಕಪಡೆಯ ಮಾಜಿ ಮುಖ್ಯ ಅಡ್ಮಿರಲ್ ಸುಶೀಲ್ ಕುಮಾರ್ ವಿರುದ್ಧ ಪ್ರಾಥಮಿಕ ತನಿಖಾ ವರದಿ(ಎಫ್‌ಐಆರ್) ತಯಾರಿಸಿ ನಿಯೋಜಿತ ನ್ಯಾಯಾಲಯಕ್ಕೆ ಸಲ್ಲಿಸಿದೆ.
 

ವಾಜಪೇಯಿ ಅವರ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅ. ೨೩, ೨೦೦೦ ರಂದು ೧,೧೫೦ ಕೋಟಿ ರೂ. ಮೌಲ್ಯದ ಇಸ್ರೇಲ್ ನಿರ್ಮಾಣದ ಬ್ಯಾರಕ್ ವ್ಯವಸ್ಥೆ ಮತ್ತು ೨೦೦ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳಲು ಆಗಿನ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಈ ವಿಷಯವಾಗಿ ಸಿಬಿಐ ಇದುವರೆಗೂ ಯಾರನ್ನೂ ಬಂಧಿಸಿಲ್ಲ.
 

`ಕಲಾಂ ಅವರೇ ಈ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳಲು ಸಲಹೆ ನೀಡಿದ್ದು. ಆದ್ದರಿಂದ ಅವರೂ ತಪ್ಪಿತಸ್ಥರಾಗಿದ್ದಾರೆ' ಎಂದು ಜಾರ್ಜ್ ಫರ್ನಾಂಡಿಸ್ ಹೇಳಿದ್ದಾರೆ. ಇಸ್ರೇಲಿನೊಂದಿಗಿನ ರಕ್ಷಣಾ ಹಗರಣಕ್ಕೆ ಸಂಬಂಧಿಸಿದಂತೆ ತಾನು ಯಾವುದೇ ರೀತಿಯ ತನಿಖೆಗೆ ಸಹಕರಿಸುವುದಾಗಿ ಇಸ್ರೇಲ್ ಹೇಳಿದೆ.

 

ಇನ್ನಷ್ಟು

೧೩ ಕೋಟಿ ಮಕ್ಕಳ ಭವಿಷ್ಯ ಕತ್ತಲೆಯಲ್ಲಿ

ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ

ಸಂಸ್ಕೃತಿ ಇಲಾಖೆಯಿಂದ `ಪ್ರತಿಭಾನ್ವೇಷಣೆ'

ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ

ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ

ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ

ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ

ಬಗೆ ಹರಿದ ಭಾಷಾ ಕಲಿಕಾ ವಿವಾದ

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com